ಬೆಂಗಳೂರು:- ಇತ್ತೀಚೆಗೆ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದ್ದು, ಇನ್ನೂ ತನಿಖೆ ಚುರುಕಾಗಿ ಸಾಗುತ್ತಿದೆ.
ಪಾಕಿಸ್ತಾನಕ್ಕೆ ಬಿಇಎಲ್ನಿಂದ ರಕ್ಷಣಾ ಮಾಹಿತಿ ರವಾನೆ: UP ಮೂಲದ ಗೂಢಚಾರ ಅರೆಸ್ಟ್!
ಇದರ ಬೆನ್ನಲ್ಲೇ ಡಿಆರ್ ಐ ಅಧಿಕಾರಿಗಳು ಮತ್ತೊಂದು ಭರ್ಜರಿ ಭೇಟೆ ನಡೆಸಿ, ಬರೋಬ್ಬರಿ 38.4 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. KIAL ಮೂಲದ ಮಹಿಳೆ ಬಳಿ 3.2 kg ಕೊಕೈನ್ ಸಿಕ್ಕಿಬಿದ್ದಿದೆ. ಘಾನಾ ಮೂಲದ ಜೆನ್ನಿಫರ್ ಅಬ್ಬೇ ಎಂಬಾಕೆ ಬಳಿ ಕೊಕೈನ್ ಪತ್ತೆಯಾಗಿದೆ. ಕತಾರ್ ನ ದೋಹದಿಂದ ಬೆಂಗಳೂರಿಗೆ ಮಹಿಳೆ ಬಂದಿದ್ದರು.
ಘಾನಾ ಮೂಲದ ಮಹಿಳೆ ಇಂದು ಕೆಂಪೇಗೌಡ ಅಂತರಾಷ್ಡ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಈ ವೇಳೆ ಖಚಿತ ಮಾಹಿತಿ ಆಧರಿಸಿ ಮಹಿಳೆ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಕೋಟಿ ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಡಿಆರ್ ಐ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಸದ್ಯ ಮಹಿಳೆಯನ್ನ ಬಂಧಿಸಿ ಡಿಆರ್ ಐ ತಂಡ ಕಸ್ಟಡಿಗೆ ಪಡೆದಿದೆ.