ರಾಯಬಾಗ:- ಬಿಜೆಪಿ ಮುಖಂಡರು ಕಾರ್ಯಕರ್ತರು ಮತ್ತು ವಿವಿದ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.
ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಘಟಪ್ರಭಾ ಪ್ರಾದೇಶಿಕ ವಿಭಾಗ ಗೊಕಾಕ ಶಿವಾನಂದ ನಾಯಕವಾಡಿ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದಾರೆ. ರಾಯಬಾಗ PWD ಕಚೇರಿಯಿಂದ ಪಟ್ಟಣದ ಜೆಂಡಾ ಕಟ್ಟೆವರೆಗೆ ಪ್ರತಿಭಟನಾಕಾರರು ಪ್ರತಿಭಟನೆ ಉದ್ದಕ್ಕೂ ಶಿವಾನಂದ ನಾಯಕವಾಡಿ ವಿರುದ್ದ ದಿಕ್ಕಾರ ಕೂಗುತ್ತಾ ಪ್ರತಿಭಟನೆ ಮಾಡಿದ್ದಾರೆ.
ಶಿವಾನಂದ ನಾಯಕವಾಡಿ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ. ರಾಯಬಾಗ ಶಾಸಕ ದುರ್ಯೋಧನ ಐಹೋಳೆಯವರು ಅರಣ್ಯ ಇಲಾಖೆಯ ಕಟ್ಟಡ ಕಾಮಗಾರಿ ವಿಷಯವಾಗಿ ಪೋನ ಕರೆ ಮೂಲಕ ಮಾತನಾಡುವ ಸಮಯದಲ್ಲಿ ಏಕವಚನ ಬಳಸಿ ಅವಮಾನಿಸಿದ ಅರಣ್ಯ ಇಲಾಖೆ ಉಪ ಸಂರಕ್ಷಾಧಿಕಾರಿ ಘಟಪ್ರಭಾ ಪ್ರಾದೇಶಿಕ ವಿಬಾಗ ಗೋಕಾಕ್ ಅಧಿಕಾರಿಯಾದ ಶಿವಾನಂದ ನಾಯಕವಾಡಿ ಅವರನ್ನ ಕುಡಲೆ ಅಮಾನತ್ತುಗೋಳಿಸಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ.
ಸ್ಥಳಕ್ಕೆ ರಾಯಬಾಗ ತಹಶಿಲ್ದಾರ ಹಾಗೂ ಸಿಪಿಐ ಆಗಮಿಸಿ ಪ್ರತಿಭಟನಾಕಾರ ಮನವಿ ಸ್ವೀಕರಿಸಿದರು. ಪಟ್ಟಣದ ಜೆಂಡಾ ಕಟ್ಟೆ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ DCFO ಶಿವಾನಂದ ನಾಯಕವಾಡಿ ಪ್ರತಿ ಕೃತಿಗೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು,