ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ವಿರುದ್ಧ ಬ್ರಹತ್ ಪ್ರತಿಭಟನೆ ನಡೆಸಿದರು. ಭಾರತ ಸಂವಿಧಾನ ಶಿಲ್ಪಿ ಹಾಗೂ ಸಮಾಜ ಸುಧಾರಕ ಡಾ ಬಿ.ಆರ್.ಅಂಬೇಡ್ಕರ ಅವರ ವಿರುದ್ದ ಕೇಂದ್ರ ಗೃಹ ಸಚಿವ ಶ್ರೀ ಅಮಿತ ಶಾ ಅವರಿಂದ ರಾಜ್ಯಸಭೆಯಲ್ಲಿ ದಿ. 17/12/2024 ರಂದು ನಡೆದ ಅವಮಾನಕರ ಹೇಳಿಕೆಯ ಕುರಿತು ಅಮಿತ ಶಾ ಅವರು ರಾಜ್ಯ ಸಭೆಯಲ್ಲಿ “ಅಂಬೇಡ್ಕರ , ಅಂಬೇಡ್ಕರ, ಅಂಬೇಡ್ಕರ, ಅಂಬೇಡ್ಕರ, ಹೆಸರನ್ನು ಹೇಳುವುದು ಈಗ ಪ್ಯಾಸೇನ್ ಆಗಿದೆ. ಅಂಬೇಡ್ಕರ ಹೆಸರನು ಹೇಳುವ ಬದಲು ದೇವರ ಹೆಸರನ್ನು ಹೇಳಿದರೆ ಏಳು ಜನ್ಮಗಳ ವರೆಗೂ ಸ್ವರ್ಗ ಪಡೆಯಬಹುದು” ಎಂಬ ಅವಮಾನಕರ ಹೇಳಿಕೆ ನೀಡಿದ್ದಾರೆ.
ಡಾ ಬಿ.ಆರ್.ಅಂಬೇಡ್ಕರರವರು ಭಾರತೀಯ ಪ್ರಜಾಪ್ರಭುತ್ವ ಸಮಾನತೆ ಮತ್ತು ನ್ಯಾಯದ ಸಿದ್ಧಾಂತಗಳಿಗೆ ಅಡಿಪಾಯ ಇಟ್ಟ ಮಹಾನಾಯಕರಾಗಿದ್ದಾರೆ.ಅದರ ಹೆಸರು ಮಾತ್ರವಲ್ಲ ಅವರ ಆದರ್ಶಗಳು ಮತ್ತು ಅವರ ಕೃತಿಗಳು ಕೋಟ್ಯಾಂತರ ಜನಕ್ಕೆ ಸ್ಫೂರ್ತಿಯಾಗಿದೆ. ಅಮಿತ ಶಾ ರವರ ಹೇಳಿಕೆ ದೇಶದ ಸಂವಿಧಾನದ ಅಡಿಪಾಯವನ್ನು ದೋಷಿಸುತ್ತದೆ. • ಮತ್ತು ಸಮಾಜದ ಹೀನ ವರ್ಗಗಳ ಭಾವನೆಗೆ ತೀರ್ವ ಹೊಡೆತ ನೀಡುತ್ತದೆ.ಇಂತಹ ಪ್ರಜಾಪ್ರಭುತ್ವದ ವಿರುದ್ಧವಾದ ಸಮಾನತೆಗೆ ವಿರುದ್ಧವಾದ ಮತ್ತು ಡಾ| ಬಾಬಾ ಸಾಹೇಬ ಅಂಬೇಡ್ಕರವರ ಗೌರವಕ್ಕೆ ಅವಮಾನವಾದ ಹೇಳಿಕೆ ಮಾಡಿದ ವ್ಯಕ್ತಿ ಗೃಹ ಸಚಿವರ ಸ್ಥಾನಕ್ಕೆ ತಕ್ಕವರಲ್ಲ.
PM Kisan: ಪಿಎಂ ಕಿಸಾನ್ 19ನೇ ಕಂತಿನ ಹಣ ರೈತರ ಖಾತೆಗೆ ಬರೋದು ಯಾವಾಗ ಗೊತ್ತಾ..? ಇಲ್ಲಿದೆ ಉತ್ತರ
ಆದ್ದರಿಂದ ಗೃಹ ಸಚಿವ ಅಮಿತ ತಾ ಅವರು ಕ್ಷಮೆ ಯಾಚಿಸುವಂತೆ ಮತ್ತು ತಕ್ಷಣವೇ ಅವರನ್ನು ಗೃಹ ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಾಯಿಸುತ್ತಿದ್ದೇವೆ. ಇಲ್ಲದಿದ್ದರೆ ದೇಶ ವಿದೇಶಗಳಲ್ಲಿರುವ ಕೋಟಿಗಟ್ಟಲೆ ಅಂಬೇಡ್ಕರ ಅನುಯಾಯಿಗಳು ಅಮಿತ ಶಾ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಎಚ್ಚರಿಸುವ ಮೂಲಕ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ನೀಡಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ