ಗದಗ: ಗದಗ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 19 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಖತರ್ನಾಕ್ ಕಳ್ಳರು ಅರೆಸ್ಟ್ ಮಾಡಿದ್ದಾರೆ. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 19 ಪ್ರಕರಣಗಳಲ್ಲಿ 53 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರ ರಾಜ್ಯದ ಅಮರ್ ಚವ್ಹಾಣ, ಕಂಪ್ಲಿಯ ರಾಮು ಶಿಕಾರಿ ಮತ್ತು ರಾಜು @ ರಾಜ್ಯಾ ವಡ್ಡರ ಬಂಧಿತ ಆರೋಪಿಗಳು ಆಗಿದ್ದು,
ಗದಗ ಉಪವಿಭಾಗ ವ್ಯಾಪ್ತಿಯ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ 6, ಬೆಟಗೇರಿ ಬಡಾವಣೆ ಠಾಣೆಯ 3 ಹಾಗೂ ಗದಗ ಶಹರ ಪೊಲೀಸ್ ಠಾಣೆಯ 1 ಸೇರಿ ಒಟ್ಟು10 ಸ್ವತ್ತಿನ ಪ್ರಕರಣಗಳಲ್ಲಿ ಕಳ್ಳತನವಾದ 31.25 ಲಕ್ಷ ರೂ. ಮೌಲ್ಯದ 625 ಗ್ರಾಂ ತೂಕದ ಬಂಗಾರದ ಆಭರಣಗಳು, 3 ಲಕ್ಷ ರೂ. ಮೌಲ್ಯದ 5,094 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.