ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ ನಡೆಯುತ್ತಿದ್ದು, 32,438 ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಎಲ್ಲರೂ ಇವುಗಳಿಗೆ ಅಪ್ಲೇ ಮಾಡಬಹುದು. ಅಧಿಕೃತ ಅಧಿಸೂಚನೆಯನ್ನು ಜನವರಿ 21ರಂದೇ ಪ್ರಕಟಿಸಲಾಗಿದೆ.
ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನಬಹುದೇ..? ತಿಂದ್ರೆ ಏನಾಗುತ್ತದೆ.? ಇಲ್ಲಿದೆ ನೋಡಿ ಮಾಹಿತಿ
ಕೇಂದ್ರ ಸರ್ಕಾರದಡಿ ರೈಲ್ವೆ ಇಲಾಖೆ ಬರುವುದರಿಂದ ಆಯ್ಕೆ ಆದ ಅಭ್ಯರ್ಥಿಗಳನ್ನು ದೇಶದ ಯಾವುದೇ ಪ್ರದೇಶದಲ್ಲಿ ಕೆಲಸಕ್ಕೆ ನೇಮಕ ಮಾಡಬಹುದು. ಉತ್ತಮ ಮಟ್ಟದ ಸಂಬಳದೊಂದಿಗೆ ಭತ್ಯ ನೀಡುತ್ತದೆ. ಹಲವು ವರ್ಷಗಳಿಂದ ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶ. ಇನ್ನು ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ ಆಗಿದೆ.
ರೈಲ್ವೆ ಇಲಾಖೆಯು ದೇಶಾದ್ಯಂತ 32,438 ಗ್ರೂಪ್- ಡಿ ಉದ್ಯೋಗಗಳನ್ನು ಭರ್ತಿ ಮಾಡುತ್ತಿದ್ದು ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕವಾಗಿ ವೇತನ ಆರಂಭದಲ್ಲಿ 18,000 ರೂಪಾಯಿಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ವಿದ್ಯಾರ್ಹತೆಗೆ ಬಂದರೆ 10ನೇ ತರಗತಿ ಪಾಸ್ ಆಗಿದ್ದರೇ ಸಾಕು. ಇದರ ಜೊತೆ ಐಟಿಐ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿದ್ದರೇ ನಿಮ್ಮ ಆಯ್ಕೆ ಸುಲಭವಾಗಲಿದೆ.
ಗ್ರೂಪ್ ಡಿ ಉದ್ಯೋಗಗಳಿಗೆ ದೇಶಾದ್ಯಂತ ಅರ್ಜಿ ಸಲ್ಲಿಕೆಯು 23 ಜನವರಿ 2025 ರಿಂದ ಆರಂಭವಾಗಿ 22 ಫೆಬ್ರವರಿ 2025ಕ್ಕೆ ಕೊನೆಗೊಳ್ಳುತ್ತದೆ. 18 ರಿಂದ 33 ವರ್ಷಗಳ ಒಳಗಿನವರಿಗೆ ಮಾತ್ರ ಈ ಕೆಲಸಗಳಿಗೆ ಅರ್ಹರು ಆಗಿರುತ್ತಾರೆ. ಅಲ್ಲದೇ ವರ್ಗವಾರು ವಯೋಮಿತಿ ಸಡಿಲಿಕೆ ನೀಡಲಾಗಿದ್ದು ಎಸ್ಸಿ, ಎಸ್ಟಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ವಿಶೇಷ ಚೇತನರಿಗೆ 10 ವರ್ಷ ಸಡಿಲಿಕೆ ಇದೆ.
ಕಂಪ್ಯೂಟರ್ ಬೇಸಡ್ ಟೆಸ್ಟ್ (ಸಿಬಿಟಿ)
ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)
ಪುರುಷರು- 35 ಕೆಜಿ ಭಾರ ಎತ್ತಬೇಕು ಹಾಗೂ 4 ನಿಮಿಷದಲ್ಲಿ 1000 ಮೀಟರ್ ಓಡಬೇಕು
ಮಹಿಳೆಯರು- 20 ಕೆಜಿ ಭಾರ ಎತ್ತಬೇಕು ಹಾಗೂ 5 ನಿಮಿಷದಲ್ಲಿ 1000 ಮೀಟರ್ ಓಡಬೇಕು
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಯಾವುದಾದರೂ ಸರ್ಕಾರ ನೀಡಿದ ಗುರುತಿನ ಚೀಟಿ
ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳು
ಜಾತಿ ಪ್ರಮಾಣ ಪತ್ರ
ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
2 ಪಾಸ್ಪೋಟೋಗಳು ಮತ್ತು ಸಹಿ