ಚಿಕ್ಕಬಳ್ಳಾಪುರ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನವರಿ 13 ರಂದು ಬೃಹತ್ ಉದ್ಯೋಗ ಮತ್ತು ಸಾಲ ಮೇಳ ಆಯೋಜಿಸಲಾಗಿದ್ದು, 70 ಕ್ಕೂ ಅಧಿಕ ಕಂಪೆನಿಗಳು ಪಾಲ್ಗೊಳ್ಳಲಿರುವ ಈ ಮೇಳ ಯುವ ಜನಾಂಗದ ಸ್ವಾವಲಂಬಿ ಬದುಕಿಗೆ ಭದ್ರ ಬುನಾದಿಯಾಗಲಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಉದ್ಯೋಗ ಮೇಳದ ಜೊತೆಗೆ ಶೈಕ್ಷಣಿಕ ಸಾಲ, ನವೋದ್ಯಮಗಳಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಯಕ ಸಂಸ್ಕೃತಿಗೆ ಒತ್ತು ನೀಡಿದ್ದು, ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂಬ ಆಶಯ ಹೊಂದಿದ್ದು, ಇದನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುವುದು ಎಂದರು.ಕಳೆದ 2019 ರ ಅಂಕಿ ಅಂಶಗಳಂತೆ ದೇಶದಲ್ಲಿ ನಿರುದ್ಯೋಗ ಪ್ರಮಾಣ 7.7% ಕ್ಕೆ ಏರಿಕೆಯಾಗಿದ್ದು, 45 ವರ್ಷಗಳಲ್ಲೇ ಇದು ಅತ್ಯಧಿಕವಾಗಿತ್ತು. ದುರಂತವೆಂದರೆ 2023 ರ ನವೆಂಬರ್ ನಲ್ಲಿ ಈ ಪ್ರಮಾಣ 10.05% ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಉದ್ಯೋಗ ದರ 6.2% ರಿಂದ 10.82% ಕ್ಕೆ ಹೆಚ್ಚಳವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆ ಭರವಸೆಯಾಗಿಯೇ ಉಳಿದಿದೆ. ಪ್ರಸ್ತುತ ಬಿಜೆಪಿ ಆಡಳಿತವಿರುವ ಹರಿಯಾಣ 37.4 ಶೇ ರಷ್ಟು ನಿರುದ್ಯೋಗ ಪ್ರಮಾಣವಿದ್ದು, ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ಬಗ್ಗೆ ಆತಂಕ ಮೂಡಿಸುತ್ತಿದೆ ಎಂದರು.ಇನ್ನೂಉದ್ಯೋಗ ಮೇಳದಲ್ಲಿ 70 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, ಪ್ರಮುಖ 5 ಬ್ಯಾಂಕ್ಗಳು ಸಾಲ ಸೌಲಭ್ಯ ಒದಗಿಸಲು ಮುಂದಾಗಿವೆ. ಸಂದರ್ಶನದ ಕಾರ್ಯಕ್ಷಮತೆ, ಕೌಶಲ್ಯ, ಶಿಕ್ಷಣದ ಆಧಾರದ ಮೇಲೆ 16,000 ರಿಂದ 1 ಲಕ್ಷ ರೂಪಾಯಿವರೆಗೆ ವೇತನ ದೊರೆಯುವ ಉದ್ಯೋಗಗಳನ್ನು ದೊರಕಿಸಿಕೊಡಲು ಒತ್ತು ನೀಡಲಾಗುತ್ತಿದೆ. ನವೋದ್ಯಮಗಳ ಬೆಳವಣಿಗೆ, ಶೈಕ್ಷಣಿಕ ಸಾಲಗಳ ಮೇಲೂ ಗಮನಹರಿಸಿಸಲಾಗಿದೆ. ಉದ್ಯೋಗ ಮೇಳಕ್ಕೆ ಈಗಾಗಲೇ ಆನ್ಲೈನ್ ನೋಂದಣಿ ಆರಂಭವಾಗಿದೆ ಎಂದರು.
ಪ್ರಮುಖವಾಗಿ 70 ಕೂ ಹೆಚ್ಚು ಕಂಪನಿಗಳು ಉದ್ಯೋಗ ಮರದಲ್ಲಿ ಭಾಗಿಯಾಗುತ್ತಿದ್ದು ಇದನ್ನು ಎಲ್ಲರೂ ಸೌಲಭ್ಯ ಉದಗಿಸಿಕೊಳ್ಳಬೇಕೆಂದು ತಿಳಿಸಿದರು…