ಬೆಂಗಳೂರು:– ಮರುಘಾಶ್ರೀಗಳಿಗೆ ಮರಣ ದಂಡನೆ ಆಗಬೇಕಾಗಿತ್ತು ಎಂದು ಎಚ್ ವಿಶ್ವನಾಥ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸಲು ಪೋಕ್ಸೊ ಕಾಯ್ದೆ ಇದೆ. ನಿರ್ಭಯಾ ಪ್ರಕರಣದ ಬಳಿಕ ಅದು ಬಲಿಷ್ಠವಾಗಿದೆ. ಆದರೆ, ಶಿವಮೂರ್ತಿ ಶರಣರಂತಹವರ ಪ್ರಕರಣಗಳಲ್ಲಿ ಕರ್ನಾಟಕದಲ್ಲಿ ಪೋಕ್ಸೊ ಕಾಯ್ದೆ ದುರ್ಬಲವಾದಂತಿದೆ’ ಎಂದರು.
‘ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಸುಲಭವಾಗಿ ಜಾಮೀನು ಮಂಜೂರಾಗುವುದಿಲ್ಲ. ಆಸಾರಾಂ ಬಾಪು ಹಲವು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಆದರೆ, ಶಿವಮೂರ್ತಿ ಶರಣರು ಜೈಲಿನಿಂದ ಹೊರಗೆ ಬಂದಿದ್ದಾರೆ’ ಎಂದು ಹೇಳಿದರು.
‘ಈ ಪ್ರಕರಣದಲ್ಲಿ ಪೋಕ್ಸೊ ಕಾಯ್ದೆ ದುರ್ಬಲವಾದಂತೆ ಕಾಣುತ್ತಿದೆ. ರಾಘವೇಶ್ವರ ಶ್ರೀಗಳ ಪ್ರಕರಣ, ಸೌಜನ್ಯ ಪ್ರಕರಣ ಎಲ್ಲ ಏನಾದವು? ಶಿವಮೂರ್ತಿ ಶರಣರ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಧೀಶರು ಮಹಿಳೆ. ಅಕ್ಷಮ್ಯ ಅಪರಾಧ ಮಾಡಿದ ಶರಣರು ಹೇಗೆ ಹೊರಬಂದರು’ ಎಂದು ವಿಶ್ವನಾಥ್ ಪ್ರಶ್ನಿಸಿದರು.