ಬೆಳಗಾವಿ : 50 ಸಾವಿರ ಮರಳಿ ವಾಪಸ್ ಕೊಡದಿದ್ದಕ್ಕೆ 17 ವರ್ಷದ ಅಪ್ರಾಪ್ತೆಯನ್ನೆ ಮದುವೆಯಾದನ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿದೆ. ಬೆಳಗಾವಿ ನಗರದ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಫೋಕ್ಸೋ ಕೇಸ್ ದಾಖಲಿಸಲಾಗಿದೆ. ಆರೋಪಿ ವಿಶಾಲ್ ಢವಳಿ ಮತ್ತು ತಾಯಿ ರೇಖಾ ಢವಳಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ವಡಗಾವಿ ನಿವಾಸಿ ರೇಖಾ ಢವಳಿ ಬಳಿ ಅಪ್ರಾಪ್ತೆಯ ತಾಯಿ ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು 50 ಸಾವಿರ ಸಾಲ ಪಡೆದಿದ್ದಳು. ರೇಖಾಳಿಗೆ ಹಣ ಕೊಡಲು ಆಗದಿದ್ದರಿಂದ ಚಿನ್ನದ ಒಡವೆ ಅಡವಿಟ್ಟಿದ್ದರು. ಆದರೆ ಆರೋಪಿ ರೇಖಾ ಹಣ ವಾಪಸ್ ಕೊಡದಿದ್ದರೆ ತನ್ನ ಮಗ ವಿಶಾಲ್ಗೆ ಮದುವೆ ಮಾಡಿಕೊಡುವಂತೆ ಕೇಳಿದ್ದಳು. ಇದಕ್ಕೆ ನಿರಾಕರಿಸಿದ್ದ ಅಪ್ರಾಪ್ತೆಯ ತಾಯಿ ಅಡವಿಟ್ಟಿದ್ದ ಚಿನ್ನ ತಗೊಳ್ಳಿ, ಆದರೆ ಮದುವೆ ಮಾಡಿಕೊಡಲ್ಲ ಎಂದಿದ್ದಾರೆ. ಆದರೆ ಜ.17ರಂದು ಒತ್ತಾಯ ಪೂರ್ವಕವಾಗಿ ಆಟೋದಲ್ಲಿ ಅಪ್ರಾಪ್ತೆಯನ್ನ ಕರೆದುಕೊಂಡು ಹೋಗಿದ್ದಾರೆ. ಜ.18ರಂದು ಅಥಣಿಯ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದು, ಅದೇ ದಿನ ರಾತ್ರಿ ಆರೋಪಿ ಅಪ್ರಾಪ್ತೆಯೊಡನೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ. ಅನಂತರ ಅಪ್ರಾಪ್ತೆಯು ಟಿಳಕವಾಡಿ ಠಾಣೆಗೆ ಬಂದು ದೂರು ನೀಡಿದ್ದು, ಅಪ್ರಾಪ್ತೆ ದೂರು ಆಧರಿಸಿ ಆರೋಪಿಗಳು ಬಂಧಿಸಿದ್ದಾರೆ. ಅಲ್ಲದೇ ಅಪ್ರಾಪ್ತೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.