ಬಾಗಲಕೋಟೆ :- ಇತ್ತಿಚಿಗೆ ಕಲ ಸಮಾಜದ ಗಂಡು ಮಕ್ಕಳಿಗೆ ವಧು ಸಿಗ್ತಿಲ್ಲ.ಇರೋ ಹುಡುಗಿಯರು ಸರ್ಕಾರಿ ನೌಕರನನ್ನೇ ಮದುವೆ ಆಗುವ ಕನಸು ಕಾಣ್ತಿದ್ದಾರೆ.ಅದ್ರಲ್ಲೂ ಕೃಷಿ ಮಾಡುವ ಯುವಕನಿಗೆ ಕನ್ಯೆ ಕುಡುವವರೇ ಇಲ್ಲ.ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಮ್ಯಾರೇಜ್ ಬ್ರೋಕರ್ ತಂಡ ಅಮಾಯಕ ಯುವಕರಿಗೆ ಮದುವೆ ಮಾಡಿಸುವುದಾಗಿ ಹೇಳಿ ಲಕ್ಷ-ಲಕ್ಷ ರೂ ಪಂಗನಾಮ ಹಾಕಿರೋ ಪ್ರಕರಣ ಬೆಳಕಿಗೆ ಬಂದಿದೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಒಂದೆಡೆ ವಧು ಸಿದಕ್ಕಾಗಿ ಬ್ರೋಕರ್ ಮೂಲಕ ತಾಳಿ ಕಟ್ಟಿದ ಯುವಕ.ಇನ್ನೊಂದೆಡೆ ಮದುವೆ ಆಗದ ವಯಸ್ಸಾಗುತ್ತಿರೋ ಯುವಕರಿಗೆ ಮದುವೆ ಮಾಡಿಸುವ ಆಮಿಷ ಒಡ್ಡಿ ಲಕ್ಷ-ಲಕ್ಷ ಹಣ ವಂಚಿಸಿದ ಮ್ಯಾರೇಜ್ ಬ್ರೋಕರ್ ಟೀಂ.ಇಂತಹ ಘಟನೆಗೆ ಸಾಕ್ಷಿಯಾಗಿದ್ದು ಮುಧೋಳ ಪೋಲಿಸ್ ಠಾಣೆ.ಹೌದು ಕಳೆದ 2023ರಲ್ಲಿ ಕುನಾಳ ಗ್ರಾಮದ ಮ್ಯಾರೇಜ್ ಬ್ರೋಕರ್ ಸತ್ಯಪ್ಪ ಎಂಬಾತ ಮುಧೋಳ ನಗರದ ಸೋಮಸೇಖರ ಎಂಬಾತನಿಗೆ ಮದುವೆ ಮಾಡಿಸುತ್ತೇನೆ 4 ಲಕ್ಷಕ್ಕೆ ವ್ಯವಾಹ ಮುಗಿಯುತ್ತೆ.ಶಿವಮೊಗ್ಗದ ಮುಂಜುಳಾ ಎಂಬ ಯುವತಿ ಜೊತೆ ಸೊಮಶೇಖರನ ಮದುವೆ ಆಗುತ್ತೆ.ಸೋಮಶೇಖರ್ ಕೊಟ್ಟ ಮಾತಿನಂತೆ 4 ಲಕ್ಷ ರೂ ಮ್ಯಾರೇಜ್ ಬ್ರೋಕರ್ ಸತ್ಯಾಪ್ಪನಿಗೆ ನೀಡ್ತಾನೆ.ಒಂದೇ ತಿಂಗಳು ಕಳೆಯೊದ್ರಲ್ಲಿ ಹೆಂಡತಿ ಮಂಜುಳಾ ಶಿವಮೊಗ್ಗಗೆ ವಾಪಸ್ ಹೊಗ್ತಾಳೆ. ಆಗ ಗಂಡ ಸೋಮಶೇಖರ್ ಕರೆಯಲು ಹೊದಾಗ ಅಲ್ಲಿ ಇಬ್ಬರ ಜೊತೆ ಮದುವೆಯಾಗಿ ಅವರಿಂದಲೂ ಲಕ್ಷ-ಲಕ್ಷ ಹಣ ವಂಚಿಸಿದ್ದು ಗೊತ್ತಾಗುತ್ತೆ,ನೊಂದ ಪತಿ ಸೋಮಶೇಖರ್ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನಿಖೆಯಿಂದ ಇದೇ ಮ್ಯಾರೇಜ್ ಬ್ರೋಕರ್ ತಂಡ ಇನ್ನೂ ಇಬ್ಬರು ಯುವಕರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ.
ನ್ನು ಉತ್ತರ ಕರ್ನಾಟಕ ಭಾಗದಲ್ಲಿ ಕೆಲ ಸಮಾಜಗಳಲ್ಲಿ ಹುಣ್ಣು ಮಕ್ಕಳ ಕೊರತೆಯಿದೆ.
ಮನೆಯಲ್ಲಿ ಗಂಡು ಮಕ್ಕಳು ವಯಸ್ಸು ಮೀರಿದ್ರೂ ಕನ್ನೆ ಸಿಗ್ತಿಲ್ಲ.ಇದನ್ನೆ ಬಂಡವಾಳವಾಗಿ ಮ್ಯಾರೇಜ್ ಬ್ರೋಕರ್ ರು ಮಾಡಿಕೊಂಡಿದ್ದು.ಮದುವೆ ವಯಸ್ಸು ಮೀರಿದ ಗಂಡು ಮಕ್ಕಳನ್ನ ಟಾರ್ಗೇಟ್ ಮಾಡಿ ಮದುವೆ ಮಾಡಿಸುವ ಭರವಸೆ ನೀಡಿ,ಅವರಿಂದ ಲಕ್ಷ-ಲಕ್ಷ ಹಣ ಪಡೆದು ಎಲ್ಲೋ ಮದುವೆಯಾಗಿದ್ದ ಹುಡುಗಿ ಜೊತೆ ಮದುವೆ ಮಾಡಿ,ಒಂದು ತಿಂಗಳ ಒಳಗೆ ಗಂಡನನ್ನ ಬಿಟ್ಟು ಹೆಂಡತಿ ಮನೆ ಬಿಟ್ಟು ಹೋಗುವ ನಾಟಕ ವಾಡಿ ಲಕ್ಷ-ಲಕ್ಷ ಹಣ ದೋಚುವ ದಂಧೆ ಆರಂಭಿಸಿದ್ದಾರೆ.ಅದಕ್ಕೆ ಸಾಕ್ಷಿ ಎಂಬಂತೆ ಮುಧೋಳದ ಕೃಷಿಕ ಸೋಮಸೇಖರ್ ಗೆ ಮದುವೆ ವಯಸ್ಸು ಮೀರಿದ್ದು,ಅದನ್ನೆ ಎನ್ ಕ್ಯಾಶ್ ಮಾಡಿಕೊಂಡು ಆತನಿಂದ 4 ವರೆ ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ.ವಂಚನೆಗೊಳಗಾದ ಸೋಮಶೇಖರ್ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಮುಧೋಳ ಪೊಲೀಸರು ತನಿಖೆ ಮುಂದುವರೆಸಿದ್ದಾರೆ
ಒಟ್ಟಿನಲ್ಲಿ ಇಂದು ಸಮಾಜದಲ್ಲಿನ ನಿರುದ್ಯೋಗಿಗೆ,ಕೃಷಿಕನಿಗೆ ಹೆಣ್ಣು ಕೊಡುವ ಮನಸ್ಸು ಮಾಡ್ತಿಲ್ಲ ಹೆಣ್ಣು ಹೆತ್ತವರು.ಇದ್ರಿಂದ ಮದುವೆ ವಯಸ್ಸು ಮೀರಿದ ಹುಡುಗರು ಮದುವೆ ಆಗಲು ಮ್ಯಾರೇಜ್ ಬ್ರೋಕರ್ ಮೊರೆ ಹೊಗ್ತಿದ್ದು, ಬ್ರೋಕರ್ ಗಳು ಲಕ್ಷ-ಲಕ್ಷ ಹಣ ವಂಚಿಸಲು ಬೆರೆ ಎಲ್ಲಿಂದಲೋ ಯುವತಿಯರನ್ನ ಕರೆತಂದು ಮದುವೆ ಮಾಡಿಸಿ ಹಣ ಪಡೆದು ಪರಾರಿ ಆಗ್ತಿರೋ ಘಟನೆಗಳು ಬೆಳಕಿಗೆ ಬರುತ್ತಿರೋದು ಸುಳ್ಳಲ್ಲ.