ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಮೂರನೇ ಆವೃತ್ತಿಯ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಹಣಾಹಣಿಗೆ ಆತಿಥೇಯ ಇಂಗ್ಲೆಂಡ್ ತಂಡ ತನ್ನ ಆಡುವ 11ರ ಬಳಗವನ್ನು ಪ್ರಕಟ ಮಾಡಿದೆ.
ಇಂಗ್ಲೆಂಡ್ ಟೀಮ್ ಮ್ಯಾನೇಜ್ಮೆಂಟ್ ಎದುರು ಮ್ಯಾಥ್ಯೂ ಪಾಟ್ಸ್ ತ್ತು ಡಿಲಾನ್ ಪೆನಿಂಗ್ಟನ್ ಅವರಂತಹ ಯುವ ವೇಗದ ಬೌಲರ್ಗಳನ್ನು ಆಯ್ಕೆ ಮಾಡುವ ಅವಕಾಶ ಇತ್ತು. ಆದರೆ, ಅನುಭವಿ ಮಾರ್ಕ್ ವುಡ್ ಅವರಿಗೆ ಮಣೆ ಹಾಕಲಾಗಿದೆ. ಅಂದಹಾಗೆ ಪ್ರಥಮ ಟೆಸ್ಟ್ಗೆ ಮಾರ್ಕ್ ವುಡ್ ಅವರನ್ನು 15ರ ಬಳಗಕ್ಕೆ ಪರಿಗಣಿಸಲಾಗಿರಲಿಲ್ಲ.
ಜಗಳದಲ್ಲಿ ವಿರಾಟ್ ಕೊಹ್ಲಿ ಮಾಡಿದ್ದೇ ತಪ್ಪು : ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ
ಈವರೆಗೆ ಆಡಿರುವ 34 ಟೆಸ್ಟ್ ಪಂದ್ಯಗಳಲ್ಲಿ ಮಾರ್ಕ್ವುಡ್ ಒಟ್ದಟು 108 ವಿಕೆಟ್ಗಳನ್ನು ಪಡೆದ ಸಾಧನೆ ಮೆರೆದಿದ್ದಾರೆ. ಇದರಲ್ಲಿ ನಾಲ್ಕು ಬಾರಿ ಇನಿಂಗ್ಸ್ ಒಂದರಲ್ಲಿ 5 ವಿಕೆಟ್ಗಳನ್ನು ಪಡೆದ ಸಾಧನೆ ಸೇರಿದೆ. ಇನ್ನು 2023ರಲ್ಲಿ ಧರ್ಮಶಾಲಾದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ನಲ್ಲಿ ಅವರು ಕೊನೇ ಬಾರಿ ಇಂಗ್ಲೆಂಡ್ ಪರ ರೆಡ್ ಬಾಲ್ ಕ್ರಿಕೆಟ್ ಆಡಿದ್ದರು. ಇಸಿಬಿ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ಈ ಮೊದಲು ಮಾತನಾಡಿ, 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಮಾರ್ಕ್ ವುಡ್ ಅವರಿಗೆ ಪ್ರಥಮ ಟೆಸ್ಟ್ನಿಂದ ಹೊರಗಿಟ್ಟು ವಿಶ್ರಾಂತಿ ಕೊಪಡಲಾಗಿತ್ತು ಎಂದಿದ್ದಾರೆ. ಫಾಸ್ಟ್ ಬೌಲರ್ಗಳ ಮೇಲಿನ ಆಟದ ಹೊರೆ ನಿಭಾಯಿಸುವ ಕಡೆಗೆ ಇಸಿಬಿ ಮೊದಲ ಆದ್ಯತೆ ನೀಡಿದೆ.
ನಾಟಿಂಗ್ಹ್ಯಾಮ್ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ 11 ಹೀಗಿದೆ
01. ಝ್ಯಾಕ್ ಕ್ರಾವ್ಲೀ (ಓಪನರ್)
02. ಬೆನ್ ಡಕೆಟ್ (ಓಪನರ್)
03. ಓಲ್ಲೀ ಪೋಪ್ (ಬ್ಯಾಟರ್)
04. ಜೋ ರೂಟ್ (ಬ್ಯಾಟರ್)
05. ಹ್ಯಾರಿ ಬ್ರೂಕ್ (ಬ್ಯಾಟರ್)
06. ಬೆನ್ ಸ್ಟೋಕ್ಸ್ (ಆಲ್ರೌಂಡರ್/ ನಾಯಕ)
07. ಜೇಮಿ ಸ್ಮಿತ್ (ವಿಕೆಟ್ಕೀಪರ್/ ಬ್ಯಾಟ್ಸ್ಮನ್)
08. ಕ್ರಿಸ್ ವೋಕ್ಸ್ (ಆಲ್ರೌಂಡರ್)
09. ಮಾರ್ಕ್ ವುಡ್ (ಫಾಸ್ಟ್ ಬೌಲರ್)
10. ಗಸ್ ಅಟ್ಕಿನ್ಸನ್ (ಫಾಸ್ಟ್ ಬೌಲರ್)
11. ಶೋಯೆಬ್ ಬಶೀರ್ (ಆಫ್ ಸ್ಪಿನ್ನರ್)
ವೆಸ್ಟ್ ಇಂಡೀಸ್ ಸಂಭಾವ್ಯ ಪ್ಲೇಯಿಂಗ್ 11
ಕ್ರೇಗ್ ಬ್ರಾತ್ವೇಟ್ (ನಾಯಕ), ಮೈಕಲ್ ಲೂಯಿಸ್, ಕಿರ್ಕ್ ಮೆಕೆಂಜಿ, ಎಲಿಕ್ ಅಥಾನಾಝೆ, ಕವೆಮ್ ಹಾಡ್ಜ್, ಜೋಶುವಾ ಡಾ ಸಿಲ್ವಾ (ವಿಕೆಟ್ಕೀಪರ್), ಜೇಸನ್ ಹೋಲ್ಡರ್, ಗುಡಕೇಶ್ ಮೋತಿ, ಅಲ್ಝಾರಿ ಜೋಸೆಫ್, ಶಮಾರ್ ಜೋಸೆಫ್, ಜೇಡನ್ ಸೀಲ್ಸ್.