ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇಸ್ರೋ ಸಂಸ್ಥೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ನಿತ್ಯ ಈ ಪಾನೀಯ ಸೇವಿಸುತ್ತಾ ಬನ್ನಿ, ತಿಂಗಳಲ್ಲೇ ಸ್ಲಿಮ್ ಆಗ್ಬಿಡ್ತೀರಾ!?
ಮೆಡಿಕಲ್ ಆಫೀಸರ್, ಸಹಾಯಕ ಸೈಂಟಿಸ್ಟ್, ಟೆಕ್ನಿಷಿಯನ್, ಡ್ರಾಟ್ಮ್ಯಾನ್, ಇಂಜಿನಿಯರ್, ರಾಜಭಾಷಾ ಸಹಾಯಕ ಸೇರಿ ವಿವಿಧ ಹುದ್ದೆಗಳನ್ನು ತುಂಬುತ್ತಿದೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಬಾಹ್ಯಾಕಾಶದ ಬಗ್ಗೆ ಆಸಕ್ತಿ ಇರುವ ಹಾಗೂ ಜ್ಞಾನ ಹೊಂದಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಟ್ರೈ ಮಾಡಬಹುದು. ಹುದ್ದೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಎಲ್ಲ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಇಸ್ರೋದ ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಈ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ, ವಯೋಮಿತಿ ಇತ್ಯಾದಿಗಳನ್ನು ಈ ಕೆಳಗೆ ವಿವರಿಸಲಾಗಿದೆ. ಆಫ್ಲೈನ್ ಮೂಲಕ ಬರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ.
ಹುದ್ದೆಗಳ ಹೆಸರು, ಎಷ್ಟು ಹುದ್ದೆಗಳು ಇವೆ..?
ಮೆಡಿಕಲ್ ಆಫೀಸರ್- 3
ಸೈಂಟಿಸ್ಟ್/ ಇಂಜಿನಿಯರ್- 10
ಟೆಕ್ನಿಕಲ್ ಅಸಿಸ್ಟೆಂಟ್- 28
ಸೈಂಟಿಫಿಕ್ ಅಸಿಸ್ಟೆಂಟ್- 01
ಟಿಕ್ನಿಷಿಯನ್-ಬಿ- 43
ಡ್ರಾಟ್ಸ್ಮ್ಯಾನ್-ಬಿ- 13
ಅಸಿಸ್ಟೆಂಟ್ ರಾಜಭಾಷಾ- 01
ಒಟ್ಟು ಪೋಸ್ಟ್ಗಳು- 99
ಸಂಬಳ-
ಹೆಚ್ಎಫ್ಎಸ್ಸಿ ನಿಯಮದಂತೆ ಹುದ್ದೆಗಳಿಗೆ ತಕ್ಕಂತೆ ಸ್ಯಾಲರಿ ಇದೆ
25,500 ರೂಪಾಯಿಗಳಿಂದ 67,700 ರೂ.ಗಳು
ವಯೋಮಿತಿ-
ಸೈಂಟಿಸ್ಟ್/ಇಂಜಿನಿಯರ್- 18 ರಿಂದ 30 ವರ್ಷಗಳು
ಅಸಿಸ್ಟೆಂಟ್ ರಾಜಭಾಷಾ- 18 ರಿಂದ 28 ವರ್ಷಗಳು
ಉಳಿದಂತ ಎಲ್ಲ ಹುದ್ದೆಗೆ- 18 ರಿಂದ 35 ವರ್ಷಗಳು