ಇಂಫಾಲ್: ಮಣಿಪುರದ (Manipur0 ಗ್ರಾಹಕ ವ್ಯವಹಾರಗಳ ಸಚಿವ ಎಲ್. ಸುಸಿಂದ್ರೋ ಅವರ ಆಪ್ತ ಸಹಾಯಕರನ್ನು ಇಂಫಾಲ್ ಪೂರ್ವ ಜಿಲ್ಲೆಯ ಅವರ ನಿವಾಸದ ಬಳಿಯೇ ದುಷ್ಕರ್ಮಿಗಳ ಗುಂಪೊಂದು ಅಪಹರಿಸಿದೆ ಎಂದು ಪೊಲೀಸರು (Manipur Police) ತಿಳಿಸಿದ್ದಾರೆ.
ಎಸ್. ಸೊಮೊರೆಂಡ್ರೊ (43) ಅಪಹರಣವಾಗಿರುವ ವ್ಯಕ್ತಿ, ಘಟನೆ ಹಿಂದಿನ ಉದ್ದೇಶವು ಅಸ್ಪಷ್ಟವಾಗಿದೆ. ಘಟನೆಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ದುಷ್ಕರ್ಮಿಗಳ ಗುಂಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ
ಸಿಖ್ಖರ ಕುರಿತು ಹೇಳಿಕೆಗೆ ಆಕ್ಷೇಪ : ರಾಹುಲ್ ಗಾಂಧಿ ವಿರುದ್ಧ 3 ಎಫ್ಐಆರ್
ಇದಕ್ಕೂ ಮುನ್ನ ಗುರುವಾರ ರಾತ್ರಿ ಬಿಷ್ಣುಪುರ ಜಿಲ್ಲೆಯ ಮಾಜಿ ಮುಖ್ಯ ಕಾರ್ಯದರ್ಶಿ ಓಯಿನಮ್ ನಬಕಿಶೋರ್ ಅವರ ನಿವಾಸದ ಮೇಲೂ ಶಸ್ತ್ರಸಜ್ಜಿತ ದಾಳಿಕೋರರು ಕನಿಷ್ಠ 5 ಸುತ್ತು ಗುಂಡು ಹಾರಿಸಿದ್ದ ಘಟನೆ ನಡೆದಿತ್ತು. ಅದೃಷ್ಟವಶಾತ್ ಯಾರಿಗೂ ಪ್ತಾಣಾಪಾಯ ಸಂಭವಿಸಿರಲಿಲ್ಲ. ಇದಾದ ಮರುದಿನವೇ ಸಚಿವರ ಆಪ್ತರನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ.
ಘಟನಾ ಸ್ಥಳದಿಂದ ಖಾಲಿ ಕಾಟ್ರಿಡ್ಜ್ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ, ಬಿಷ್ಣುಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಇಲ್ಲಿನ ಥಾಡೌ ಬುಡಕಟ್ಟು ಜನಾಂಗದ ಪ್ರಮುಖ ನಾಯಕ ಹಾಗೂ ಬಿಜೆಪಿ ವಕ್ತಾರನ ಪೂರ್ವಿಕರ ಮನೆ ಮೇಲಿನ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸುವಂತೆ ಮಣಿಪುರ ಸರ್ಕಾರ ಪೊಲೀಸರಿಗೆ ಸೂಚಿಸಿದೆ.
ಚುರಾಚಂದ್ಪುರ ಜಿಲ್ಲೆಯ ಟಿ ಮೈಕೆಲ್ ಲಮ್ಜತಾಂಗ್ ಹಾಕಿಪ್ ಅವರ ಪೋಷಕರು ಹಾಗೂ ಇತರರು ವಾಸಿಸುವ ಅವರ ಮನೆಯ ಮೇಲೆ ನಡೆದ ದಾಳಿಯ ಕುರಿತು ದಾಖಲಿಸಲಾದ ಪ್ರಕರಣವನ್ನು ಆದಷ್ಟು ಬೇಗ ಎನ್ಐಎಗೆ ರವಾನಿಸಬೇಕು ಎಂದು ರಾಜ್ಯ ಸರ್ಕಾರ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದೆ. ವಿಷಯದ ಗಂಭೀರ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ತನಿಖೆಯನ್ನು ಎನ್ಐಎ ಹೆಗಲಿಗೆ ವಹಿಸುವಂತೆ ಪತ್ರದಲ್ಲಿ ತಿಳಿಸಿದೆ.