ಮಣಿಪಾಲ : ಕಳೆದ ಎರಡು ವರ್ಷಗಳಿಂದಲೂ ಸಹ ಮಣಿಪುರದಲ್ಲಿ ಭಾರೀ ಹಿಂಸಾಚಾರ ಸುದ್ದಿಯಾಗಿತ್ತು. ಇದೀಗ ಕ್ಷಿಪ್ರ ಬೆಳವಣಿಗೆಯಲ್ಲಿ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮಣಿಪುರ ಗೌರ್ವನರ್ ಅಜಯ್ ಕುಮಾರ್ ಬಲ್ಲಾ ಅವರಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಹಲವು ಯೋಜನಗಳನ್ನು ಮಣಿಪುರದಲ್ಲಿ ಜಾರಿಗೊಳಿಸಿದ್ದು, ಮಣಿಪುರದ ಅಭಿವೃದ್ಧಿ, ಜನರ ಸುರಕ್ಷತೆ ವಿಚಾರದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡು ಕೆಲಸ ಮಾಡಿದ್ದೇವೆ. ಎಂದು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಬಿರೆನ್ ಸಿಂಗ್ ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ.
ಹಿಂಸಾಚಾರ ವೇಳೆ ಬಿರೆನ್ ಸಿಂಗ್ ವಿಪಕ್ಷಗಳು ಸೇರಿದಂತೆ ದೇಶಾದ್ಯಂತ ಭಾರಿ ಪ್ರತಿಭಟನೆ ಎದುರಿಸಿದ್ದರು. ಮಣಿಪುರ ಅಮಾಯಕ ಜನರ ಪ್ರಾಣ ಉಳಿಸಲು ಮುಖ್ಯಮಂತ್ರಿ ಬಿರೆನ್ ಸಿಂಗ್ ಮುಂದಾಗಿಲ್ಲ, ಮಣಿಪುರ ಹಿಂಸಾಚಾರದಲ್ಲಿ ಮುಖ್ಯಮಂತ್ರಿ ಪಾತ್ರ ಸೇರಿದಂತೆ ಹಲವು ಆರೋಪಗಳು ಬೀರೆನ್ ಸಿಂಗ್ ಮೇಲೆ ಕೇಳಿಬಂದಿವೆ. ಸಂಸತ್ತಿನಲ್ಲಿ ಮೋದಿ ಸರ್ಕಾರಕ್ಕೂ ಮಣಿಪುರ ಹಿಂಸಾಚಾರ ತೀವ್ರ ತಲೆನೋವಾಗಿ ಪರಿಣಮಿಸಿತ್ತು.
ಇನ್ನೊಂದು ಕಡೆ ಮಣಿಪುರ ಬಿಜೆಪಿಯಲ್ಲಿ ಆತಂರಿಕ ಕದನವು ಜೋರಿದೆ. ಮಣಿಪುರ ವಿಚಾರದಲ್ಲಿ ಆರಂಭವಾಗಿದ್ದ ಬಂಡಾಯ ಇದೀಗ ಬಿರೆನ್ ಸಿಂಗ್ ವಿರುದ್ದ ತಿರುಗಿತ್ತು. ಇದಲ್ಲದೇ ಮಣಿಪುರ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಪ್ರಾದೇಶಿಕ ಪಕ್ಷ ಬೆಂಬಲ ವಾಪಸ್ ಪಡೆಯುವ ಎಚ್ಚರಿಕೆ ನೀಡಿತ್ತು. ಈ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಬಿರೆನ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಬಿರೆನ್ ಸಿಂಗ್ ರಾಜೀನಾಮೆ ನೀಡುತ್ತಿದ್ದಂತೆ ಭದ್ರತಾ ಪಡೆಗಳು ಹೈ ಅಲರ್ಟ್ ಆಗಿದೆ. ಹಿಂಸಾಚಾರ ಸಾಧ್ಯತೆ ಹೆಚ್ಚಿರುವ ಕಾರಣ ಎಲ್ಲೆಡೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.