ಬೆಂಗಳೂರು:- ಮಣಿಪಾಲ್ ಆಸ್ಪತ್ರೆಯು ಹಿರಿಯ ನಾಗರಿಕರಿಗಾಗಿ ಹೆಚ್ಚು ಸೇವೆ ನೀಡಲು ಮುಂದಾಗಿದೆ.
ಹಿರಿಯ ನಾಗರಿಕರಿಗೆ ವಿವಿಧ ಆರೋಗ್ಯ ನಿರ್ಬಂಧಗಳಿಂದ ಹಾಜರಾಗಲು ಆಗಲ್ಲ. ಈ ಸಂಧರ್ಭದಲ್ಲಿ ಮನರಂಜನಾ ಚಟುವಟಿಕೆಗಳ ಭಾಗವಾಗಲು ಆಸ್ಪತ್ರೆಯಿಂದ ಅವಕಾಶ ಕಲ್ಪಿಸಲಾಗಿದೆ. ಸುಮಾರು 200/300 ಹಿರಿಯ ನಾಗರಿಕರು ಭಾಗಿ ಆಗಲಿದ್ದು,ಹಿರಿಯರ ಬೆಂಬಲವನ್ನು ಹೆಚ್ಚಿಸಲು ಹಾಡುಗಾರಿಕೆ, ಕವನ, ಪಠಣ, ನೃತ್ಯ, ನಟನೆ ಮತ್ತು ಚಿತ್ರಕಲೆ ಸೇರಿದಂತೆ ಅದ್ಭುತ ಪ್ರತಿಭೆಗೆ ಅವಕಾಶ ನೀಡಲಾಗಿದೆ.
ಮಣಿಪಾಲ್ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ರಾಜಗೋಪಾಲ್ ಸಾಥ್ ನೀಡಿದ್ದಾರೆ. ನಮ್ಮ ಹಿರಿಯ ನಾಗರಿಕರು ಹಂಚಿಕೊಂಡು ಪ್ರೀತಿ ಮತ್ತು ಉತ್ಸಾಹದಿಂದ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ. ಕಾರ್ಯಕ್ರಮ ಪ್ರತಿಭೆಯನ್ನು ಮಾತ್ರವಲ್ಲದೆ ನಮ್ಮ ಹಿರಿಯರ ಅನಮ್ಯ ಚೈತನ್ಯ ಪ್ರದರ್ಶಿಸಿಸುತ್ತಿದೆ. ಹಿರಿಯರ ಸಕ್ರಿಯ ಭಾಗವಹಿಸುವಿಕೆ ಮತ್ತು ಕೊಡುಗೆಯು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆ ಎಂದಿದ್ದಾರೆ.