ಬೆಂಗಳೂರು: ವಿಧಾನಸಭೆಯ ಶೂನ್ಯವೇಳೆ ಮಂಗಳೂರಿನಲ್ಲಿ 17 ವರ್ಷದ ವಿದ್ಯಾರ್ಥಿ ನಾಪತ್ತೆ ಪ್ರಕರಣ ಪ್ರಸ್ತಾಪವಾಗಿದೆ. ಕಳೆದ ಫೆ.25ರಂದು ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿದ್ದು, ವಿದ್ಯಾರ್ಥಿ ಪತ್ತೆಗಾಗಿ ರಾಜ್ಯ ಸರ್ಕಾರ ಏಳು ಪೊಲೀಸ್ ತಂಡಗಳನ್ನು ರಚಿಸಿದೆ. ಈ ವಿಚಾರವನ್ನು ಸ್ಪೀಕರ್ ಯು.ಟಿ. ಖಾದರ್ ಪ್ರಸ್ತಾಪಿಸಿದರು.
ಅಲ್ಲದೇ ನಾಪತ್ತೆ ಪ್ರಕರಣದ ತನಿಖೆಯನ್ನು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿದರು. ಇದಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರ ಪರವಾಗಿ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಫೆ.25 ರಂದು, ತನ್ನ ಹಾಲ್ ಟಿಕೆಟ್ ಪಡೆಯಲು ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿ, ನಂತರ ಮನೆಗೆ ಮರಳಿಲ್ಲ. ತನ್ನ ಕುಟುಂಬ ಸದಸ್ಯರಿಗೆ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ದಿಗಂತ್ ತಿಳಿಸಿದ್ದರು. ಅಂದಿನಿಂದ ವಿದ್ಯಾರ್ಥಿ ಕಾಣೆಯಾಗಿದ್ದು, ಪೊಲೀಸರಿಗೆ ಆತನ ಮೊಬೈಲ್ ಫೋನ್ ಸಿಕ್ಕಿದೆ. ಆದರೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದರು.
ವಿದ್ಯಾಬ್ಯಾಸದ ಜೊತೆಗೆ ಬ್ಯುಸಿನೆಸ್ ಶುರು ಮಾಡಿದ್ದೇ ತಪ್ಪಾಯ್ತಾ..? ಹಣಕ್ಕಾಗಿ ಕಿರುಕುಳ – ವಿದ್ಯಾರ್ಥಿ ಸೂಸೈಡ್
ಮಂಗಳೂರು ಜಿಲ್ಲೆಯ ಬಂಟ್ವಾಳ ಬಳಿಯ ಫರಂಗಿಪೇಟೆ ಪಟ್ಟಣದ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಾಪತ್ತೆಯಾಗಿ ವಾರ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ “ನಿಷ್ಕ್ರಿಯತೆ” ಖಂಡಿಸಿ ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ಶನಿವಾರ ಫರಂಗಿಪೇಟೆ ಬಂದ್ ಮಾಡಿ, ಪ್ರತಿಭಟನೆ ನಡೆಸಿದ್ದವು.