ಬೆಂಗಳೂರು:- ಮಂಗಳಮುಖಿ ಶವ ರೈಲ್ವೇ ಹಳಿಯಲ್ಲಿ ಪತ್ತೆ ಆಗಿದ್ದು, ಕಳೆದ ಒಂದು ವರ್ಷದಲ್ಲಿ ಅವನು ಅವಳಾಗಿ ಬದಲಾದವ ದುರಂತ ಆಗಿದ್ದಾರೆ. ಹಾಗಿದ್ರೆ ಅಷ್ಟಕ್ಕೂ ಏನ್ ಆಯ್ತು.
ದರ್ಶನ್ ರಿಲೀಸ್ ಆಗಲು ಹರಕೆ ಹೊತ್ತಿದ್ರಾ ಕಾಟೇರಾ ಡೈರೆಕ್ಟರ್! ತರುಣ್ ಸುಧೀರ್ ಹೇಳಿದ್ದು ಹೀಗಿದೆ!
ಎಸ್, ಯುವಕನೊಂದಿಗೆ ಮಂಗಳಮುಖಿ ಶವ ಪತ್ತೆಯಾಗಿರುವ ಘಟನೆ ಕೋಲಾರ ನಗರದ ಕೀಲುಕೋಟೆ ರೈಲ್ವೇ ಹಳಿಯಲ್ಲಿ ಜರುಗಿದೆ. ಮೃತ ಮಂಗಳಮುಖಿಯನ್ನು ವಸೀಂ ಆಲಿಯಾಸ್ ಅಲಿಯಾ ಎಂದು ಗುರುತಿಸಲಾಗಿದೆ.
ಅಚ್ಚರಿ ಅಂದ್ರೆ ಆಲಿಯಾಳ ಪಕ್ಕದಲ್ಲೇ ಯುವಕನೋರ್ವನ ಶವ ಸಹ ಸಿಕ್ಕಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಸೀಂ ಅಲಿಯಾಸ್ ಆಲಿಯಾ ಸಾವನ್ನಪ್ಪಿದ ಮಂಗಳಮುಖಿ ಪಕ್ಕದಲ್ಲೇ ಮತ್ತೋಬ್ಬ ಅಯಾಜ್ ಎನ್ನುವ ಮೆಕಾನಿಕ್ ಮೃತದೇಹ ಪತ್ತೆಯಾಗಿದೆ.
ಇಬ್ಬರ ಶವಗಳು ಅಕ್ಕಪಕ್ಕದಲ್ಲೇ ಬಿದ್ದಿದ್ದು, ಸ್ಥಳದಲ್ಲೇ ಬೀಯರ್ ಬಾಟಲಿ, ಮದ್ಯದ ಪ್ಯಾಕೇಟ್, ಕಬಾಬ್, ವಿಮಲ್ ಗುಟ್ಕಾ ಪ್ಯಾಕೇಟ್ ಸೇರಿದಂತೆ ಆಲಿಯಾಳ ಕಲೆಕ್ಷನ್ ಆಗಿದ್ದ ಹಣ ಸಹ ರೈಲ್ವೇ ಹಳಿಯಲ್ಲಿ ಬಿದ್ದಿದೆ. ಹೀಗಾಗಿ ಇಬ್ಬರು ಎಣ್ಣೆ ಮತ್ತಿನಲ್ಲಿದ್ದಾಗ ರೈಲು ಗುದ್ದಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಆದ್ರೆ, ಇಬ್ಬರ ಸಾವಿಗೆ ನಿಖರ ಕಾರಣ ಮಾತ್ರ ತಿಳಿದುಬಂದಿಲ್ಲ.
ರಾತ್ರಿ ರೈಲ್ವೇ ಹಳಿ ಮೇಲೆ ಆಲಿಯಾ ಹಾಗೂ ಅಯಾಜ್ ಇಬ್ಬರು ಕೆಲಕಾಲ ಛತ್ರಿ ಹಿಡಿದುಕೊಂಡು ಕುಳಿತಿದ್ದಾರೆ. ಬಳಿಕ ಚೆನ್ನಾಗಿ ಕುಡಿದು ಮೈಮರೆತಿದ್ದಾರೆ. ಈ ವೇಳೆ ರೈಲು ಗುದ್ದಿಕೊಂಡು ಹೋಗಿರಬಹುದು ಎಂದು ಎನ್ನಲಾಗಿದೆ. ಸದ್ಯ ಅಕ್ಕಪಕ್ಕದಲ್ಲೇ ಇಬ್ಬರ ಶವಗಳು ಪತ್ತೆಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.