ಬೆಂಗಳೂರು: ವಿಧಾನಸಭೆಯ ಪ್ರಶ್ನೋತ್ತರಲ್ಲಿಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ಜಮೀನು ಪಹಣಿ ಗೊಂದಲ ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಪಹಣಿಗೆ ಅರ್ಜಿ ಹಾಕಿದ್ದರೂ ಪಹಣಿ ಕೊಡ್ತಿಲ್ಲ. ಹೀಗಾಗಿ ಸಾಕಷ್ಟು ರೈತರಿಗೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಶಾಸಕ ರವಕುಮಾರ್ ಗಣಿಗ ಪ್ರಶ್ನೆಗೆ ಉತ್ತರಿಸಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ಸುಮಾರು 30 ವರ್ಷಗಳಿಂದ ಪಹಣಿ ಬಿದ್ದಿವೆ. ಮೂಲ ಜಮೀನು ಇರುವವರು ಅಲ್ಲಿಲ್ಲ. ಬೇರೆಯವರು ಅಲ್ಲಿ ಬಂದು ಕೂರ್ತಾರೆ. ಅಂತವರಿಗೆ ಜಮೀನು ಮಾಡಿ ಕೊಡಲಾಗಲ್ಲ. ಜಮೀನು ಖಾಲ ಬಿಟ್ಟ ನಂತರ ಸಾಗುವಳಿ ಮಾಡ್ತಿಲ್ಲ. ಅರ್ಜಿ ಯಾರು ಹಾಕಿದ್ದಾರೋ ಅವರ ಅರ್ಜಿ ವಿಲೇಮಾರಿ ಮಾಡ್ತೇವೆ. ಮಂಡ್ಯದಲ್ಲೂ 500 ಅರ್ಜಿಗಳು ಬಂದಿವೆ. ಅದರ ನೈಜತೆ ನೋಡಿ ಪಹಣಿ ಮಾಡಿಕೊಡುತ್ತೇವೆ. ನೈಜತೆಯ ಬಗ್ಗೆ ನಾವು ಸ್ಟಡಿ ಮಾಡುತ್ತೇವೆ. ಯಾರು ಸಾಗುವಳಿ ಮಾಡ್ತಾರೆ ಅವರಿಗೆ ಪಹಣಿ ಮಾಡಿಕೊಡ್ತೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಉತ್ತರಿಸಿದ್ದಾರೆ.
ರಾಜ್ಯದಲ್ಲಿ ಪಹಣಿ ಗೊಂದಲ ಬಗ್ಗೆ ಧ್ವನಿ ಎತ್ತಿದ ಮಂಡ್ಯ ಶಾಸಕ ರವಿಕುಮಾರ್ ಗಣಿಗ
By Author AIN