IPL 2025ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ RCB ನಡೆ ಕಂಡು ಫ್ಯಾನ್ಸ್ ತೀವ್ರ ಬೇಸರ ಹೊರ ಹಾಕಿದ್ದಾರೆ.
ಪ್ರಮುಖ, ಬ್ಯಾಟರ್ ಬೌಲರ್ ಗಳನ್ನೇ ಕೈ ಬಿಟ್ಟು ಬೇರೆ ಆಟಗಾರರನ್ನು ಖರೀದಿ ಮಾಡಿರುವ RCB ಪ್ರಾಂಚೈಸಿ ಮೇಲೆ ಫ್ಯಾನ್ಸ್ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
45 ಸಾವಿರ ಕೋಟಿ ಆಸ್ತಿ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ ಶ್ರೀಮಂತ ಉದ್ಯಮಿಯ ಮಗ
ಇನ್ನೂ ಮಂಡ್ಯ ಫ್ಯಾನ್ಸ್ ಒಂದು ಹೆಜ್ಜೆ ಮುಂದೆ ಹೋಗಿ, RCB ತಂಡವನ್ನೇ ಖರೀದಿ ಮಾಡಲು ಕರೆ ಕೊಟ್ಟಿದ್ದಾರೆ. ಪ್ರಸಕ್ತ ಸೀಸನ್ನಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ಪ್ರಮುಖ ಆಟಗಾರರನ್ನ ಖರೀದಿಸದ್ದಕ್ಕೆ ಮನವಳ್ಳಿ ಆರ್ಸಿಬಿ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಹೀಗಾಗಿ, ತಂಡವೂ ನಮ್ಮದೇ, ಕಪ್ಪೂ ನಮ್ಮದೇ ಎಂಬ ಆರ್ಸಿಬಿ ಮಾಲೀಕತ್ವ ಪಡೆಯೋಣ ಎಂದು ಕರೆ ಕೊಟ್ಟಿದ್ದಾರೆ.
ಆಲ್ ಇಂಡಿಯಾ ಆರ್ಸಿಬಿ ಫ್ಯಾನ್ಸ್ ಅಸೋಸಿಯೇಷನ್ ವೇದಿಕೆ ಸಿದ್ದವಾಗಿದೆ. ನೋಂದಣಿಗೆ ವೇದಿಕೆ ಸಿದ್ಧವಾಗಿದೆ. ಆರ್ಸಿಬಿ ಮಲೀಕತ್ವ ಪಡೆಯೋಣ ಎಂಬ ಪೋಸ್ಟರ್ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.\
10 ಲಕ್ಷ ಆರ್ಸಿಬಿ ಅಭಿಮಾನಿಗಳಿಂದ ತಲಾ 10 ಸಾವಿರದಂತೆ ಷೇರು ಹಣ ಸಂಗ್ರಹ, ಸಂಗ್ರಹವಾದ 1000 ಕೋಟಿ ಹಣದಲ್ಲಿ ತಂಡದ ಆಟಗಾರರನ್ನೆ ನಾವೇ ಖರೀದಿಸುತ್ತೇವೆ. ಅಭಿಮಾನಿಗಳ ವೋಟಿಂಗ್ ಮೂಲಕ ಆಟಗಾರರ ಖರೀದಿ, ಪ್ರತಿ ಸದಸ್ಯರಿಗೆ ಸೀಸನ್ನಲ್ಲಿ ಆರ್ಸಿಬಿ ಆಡುವ ಒಂದು ಪಂದ್ಯವನ್ನು ಉಚಿತವಾಗಿ ವೀಕ್ಷಣೆ ಮಾಡಲು ಅವಕಾಶ, ಅಭಿಮಾನಿಗಳೇ ಬನ್ನಿ ಆರ್ಸಿಬಿ ಮಾಲೀಕರಾಗೋಣಾ ಎಂದು ಕರೆ ಕೊಟ್ಟಿದ್ದಾರೆ. ತಂಡವನ್ನ ಆಯ್ಕೆ ಮಾಡಲು ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.
ಹಾಲಿ RCB ಮಾಲೀಕರಿಂದ ತಂಡವನ್ನು ಅಭಿಮಾನಿಗಳ ಸಂಘಕ್ಕೆ ಖರೀದಿ ಮಾಡಿಕೊಳ್ಳುವ ಮಹತ್ವದ ಗುರಿಯನ್ನು ಹೊಂದಲಾಗಿದೆ.
10 ಲಕ್ಷ ಅಭಿಮಾನಿಗಳಿಂದ ತಲಾ 10 ಸಾವಿರ ರೂ. ಹಣವನ್ನು ಚೇರಿನ ರೂಪದಲ್ಲಿ ಸಂಗ್ರಹಿಸುವ ಮೂಲಕ 1000 ಕೋಟಿ ಹಣ ಸಂಗ್ರಹಿಸುವ ಗುರಿ.
ಸಂಗ್ರಹವಾದ ಹಣದಿಂದ RCB ತಂಡದ ಮಾಲೀಕತ್ವವನ್ನು ಅಭಿಮಾನಿಗಳ ಸಂಘವೇ ಖರೀದಿಸಿ ತಂಡದಲ್ಲಿ ಯಾವ್ಯಾವ ಆಟಗಾರರನ್ನು ಆಡಿಸಬೇಕೆಂಬುದನ್ನು ಅಭಿಮಾನಿಗಲೇ ವೋಟ್ ಮೂಲಕ ಆಯ್ಕೆ ಮಾಡಿ ಅಂತಹ ಆಟಗಾರರನ್ನು ನಿಯಮದಂತೆ ಬಿಡ್ಡಿಂಗ್ನಲ್ಲಿ ಆಯ್ಕೆ ಮಾಡಿಕೊಳ್ಳುವುದೇ ಸಂಘದ ಉದ್ದೇಶ.
ಅಭಿಮಾನಿಗಳ ಸಂಘದ 1 ಲಕ್ಷ ಸದಸ್ಯರಲ್ಲಿ 10 ಮಂದಿಯನ್ನು 2 ವರ್ಷಕ್ಕೊಮ್ಮೆ ಚುನಾವಣೆಯ ಮೂಲಕ ಆಯ್ಕೆ ಮಾಡಿ ಬಿಡ್ಡಿಂಗ್ನಲ್ಲಿ ತಂಡವನ್ನು ಆಯ್ಕೆ ಮಾಡುವ ಅಧಿಕಾರ ನೀಡುವುದು.
ಸಂಘದ ಪ್ರತಿ ಸದಸ್ಯರಿಗೂ ಒಂದು ಬಾರಿ RCB ಆಡುವ ಯಾವುದಾದರೂ ಪಂದ್ಯವನ್ನು ವೀಕ್ಷಿಸಲು ಉಚಿತವಾಗಿ ಅವಕಾಶ ನೀಡಲಾಗುವುದು.