ಮಂಡ್ಯ : ಅಬಕಾರಿ ಅಧಿಕಾರಿಗಳ ಲಂಚಾವತಾರ ಪ್ರಕರಣ ಸಂಬಂಧ ಎಫ್ ಐಆರ್ ಗೂ ಮುನ್ನವೇ ಲೋಕಾಯುಕ್ತ ತನಿಖೆ ಕೈಗೊಂಡಿದೆ. ಈ ಮೂಲಕ ಲೋಕಾಯುಕ್ತ ಅಧಿಕಾರಿಗಳು ದೂರಿನ ವಾಸ್ತವತೆ ಅರಿಯಲು ಮುಂದಾಗಿದ್ದಾರೆ. ಅಬಕಾರಿ ಡಿಸಿ ರವಿಶಂಕರ್, ಇನ್ಸ್ ಪೆಕ್ಟರ್ ಶಿವಶಂಕರ್ ವಿರುದ್ದ ಕಾರ್ಯಕರ್ತ ಪುನೀತ್ ಎಂಬುವರು ದೂರು ನೀಡಿದ್ದರು. ಅಲ್ಲದೇ ಈ ಸಂಬಂಧ ಆಡಿಯೋ, ವಿಡಿಯೋ ದಾಖಲೆಗಳನ್ನು ನೀಡಿದ್ದು, ಇದೀಗ ಲೋಕಾಯುಕ್ತ ಪುನೀತ್ ಆರೋಪದಲ್ಲಿ ಸತ್ಯಾಂಶ ಬಗ್ಗೆ ತನಿಖೆ ಕೈಗೊಂಡಿದೆ. ಜೊತೆಗೆ ಆಡಿಯೋ, ವಿಡಿಯೋ ಬಗೆಯೂ ಪರಿಶೀಲನೆ ನಡೆಸಲಿದೆ. ಇನ್ನೂ ಎರಡು ಮೂರು ದಿನದಲ್ಲಿ ಪ್ರಾಥಮಿಕ ತನಿಖೆ ನಡೆಸಿ ಡಿಐಜಿಗೆ ವರದಿ ಸಲ್ಲಿಸಲಿದ್ದು, ಲೋಕಾಯುಕ್ತ ಡಿಐಜಿ ಆದೇಶ ನೀಡಿದ್ರೆ ಎಫ್ಐಆರ್ ದಾಖಲಿಸಲು ನಿರ್ಧಾರ ಮಾಡಲಿದ್ದೇವೆ ಎಂದು ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶಬಾಬು ಮಾಹಿತಿ ನೀಡಿದ್ದಾರೆ.
ಸಚಿವ ಸ್ಥಾನ ನೀಡಿ ಎಂದು ಕೇಳಿಲ್ಲ, ಜವಾಬ್ದಾರಿ ಕೊಟ್ಟರೆ ನಿಭಾಯಿಸುವೆ : ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಿಪಿವೈ
ಇನ್ನೊಂದೆಡೆ ಈಗಾಗಲೇ ಆರೋಪ ಹೊತ್ತ ಅಬಕಾರಿ ಅಧಿಕಾರಿಗಳ ತಲೆದಂಡಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಅಬಕಾರಿ ಸಚಿವ ಆರ್.ವಿ.ತಿಮ್ಮಾಪುರ ಅಧಿಕಾರಿಗಳ ಅಮಾನತು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಪುನೀತ್ ನೀಡಿರುವ ಆಡಿಯೋದಲ್ಲಿ sಸಚಿವ ಚೆಲುವರಾಯಸ್ವಾಮಿ ಹೆಸರು ಕೂಡ ಕೇಳಿ ಬಂದಿದ್ದು, ಎಫ್ ಐಆರ್ ಫಿಕ್ಸ್ ಆದರೆ ಸಚಿವ ಚಲುವರಾಯಸ್ವಾಮಿಗೂ ಸಂಕಷ್ಟ ಎದುರಾಗುವುದು ಖಚಿತ ಎನ್ನಲಾಗುತ್ತಿದೆ.