ಟಾಲಿವುಡ್ ನಟ ಮಂಚು ಮನೋಜ್ ಇತ್ತೀಚೆಗೆ ತಮ್ಮ ಖಾಸಗಿ ವಿಚಾದವಾಗಿ ಹೆಚ್ಚು ಹೆಚ್ಚು ಸುದ್ದಿಯಾಗವುತ್ತಿದ್ದಾರೆ. ಸಿನಿಮಾಗಳ ಕೊರತೆ, ಎರಡನೇ ಮದುವೆ, ಕುಟುಂಬ ಸದಸ್ಯರೊಂದಿಗಿನ ಘರ್ಷಣೆಗಳು ಮತ್ತು ಆಸ್ತಿ ವಿವಾದಗಳಿಗಾಗಿ ಸಹೋದರ ಮತ್ತು ತಂದೆಯೊಂದಿಗೆ ಜಗಳಗಳು ಮುಂತಾದವುಗಳಿಂದ ಮಂಚು ಮನೋಜ್ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಭಕರಪೇಟೆ ಪೊಲೀಸ್ ಠಾಣೆಗೆ ತೆರಳಿದ ನಟ ಈ ವೇಳೆ ಠಾಣೆಯಲ್ಲಿ ಹೈಡ್ರಾಮ ಸೃಷ್ಟಿಸಿದ್ದಾರೆ.
ಪೊಲೀಸರು ತನ್ನನ್ನು ಹಿಂಬಾಲಿಸುತ್ತಿದ್ದಾರೆ, ತನ್ನ ಮೇಲೆ ಕಣ್ಣಿಡುತ್ತಿದ್ದಾರೆ ಮತ್ತು ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಮಂಜು ಮನೋಜ್ ಪೊಲೀಸರೊಂದಿಗೆ ಜಗಳವಾಡಿದ್ದಾರೆ. ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯದಿಂದ ಬೀದಿಗೆ ಇಳಿದ ಮಂಚು ಮನೋಜ್ ಇದೀಗ ಮಧ್ಯರಾತ್ರಿಯಲ್ಲಿ ಠಾಣೆಗೆ ತೆರಳಿ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ.
ಸೋಮವಾರ ರಾತ್ರಿ ಮಂಚು ಮನೋಜ್ ಭಕರಪೇಟೆ ಪೊಲೀಸ್ ಠಾಣೆಗೆ ಆಗಮಿಸಿದ್ದು ಕೋಲಾಹಲ ಸೃಷ್ಟಿಸಿದ್ದಾರೆ. ಮನೋಜ್ ಕುಮಾರ್ ಭಕರಪೇಟೆ ಘಾಟ್ ರಸ್ತೆಯಲ್ಲಿರುವ ಲೇಕ್ ವ್ಯಾಲಿ ರೆಸಾರ್ಟ್ಸ್ನಲ್ಲಿ ತಂಗಿದ್ದರು. ರಾತ್ರಿ 11 ಗಂಟೆಗೆ ತಮ್ಮ ಗಸ್ತಿನ ಭಾಗವಾಗಿ ಎಸ್ಐ ರಾಘವೇಂದ್ರ ರೆಸಾರ್ಟ್ಗೆ ಹೋಗಿ ಅಲ್ಲಿ ಯಾರಿದ್ದಾರೆ ಎಂದು ವಿಚಾರಿಸಿದರು.
ಇದೇ ವೇಳೆ ಮಂಚು ಮನೋಜ್ ಎಸ್ಐ ಬಳಿ ಬಂದು ಇಲ್ಲಿಗೆ ಏಕೆ ಬಂದಿದ್ದೀರಿ ಎಂದು ಕೇಳಿದ್ದಾರೆ. ಸೆಲೆಬ್ರಿಟಿಗಳಾದ ನೀವು ದಟ್ಟವಾದ ಅರಣ್ಯ ಪ್ರದೇಶದ ಹತ್ತಿರ ಇರುವುದು ಒಳ್ಳೆಯದಲ್ಲ ಎಂದು ಎಸ್ಐ ಹೇಳಿದರು. ಆದರೆ, ಮನೋಜ್ ಅವರು ರೆಸಾರ್ಟ್ನಲ್ಲಿದ್ದರೆ ಸೈರನ್ ಅನ್ನು ಏಕೆ ಆನ್ ಮಾಡುತ್ತೀರಿ ಮತ್ತು ಅವರ ಖಾಸಗಿತನಕ್ಕೆ ಏಕೆ ಭಂಗ ತರುತ್ತೀರಿ ಎಂದು ಎಸ್ಐ ಅವರನ್ನು ಪ್ರಶ್ನಿಸಿದರು.
ಪಾರ್ಟಿ ಮುಗಿದ ತಕ್ಷಣ, ಮನೋಜ್ ರೆಸಾರ್ಟ್ಗಳಿಂದ ನೇರವಾಗಿ ಭಕರಪೇಟೆ ಪೊಲೀಸ್ ಠಾಣೆಗೆ ಹೋದರು. ಅವರು ಸಿಐ ಇಮ್ರಾನ್ ಬಾಷಾ ಅವರೊಂದಿಗೆ ಫೋನ್ನಲ್ಲಿ ವಾಗ್ವಾದ ನಡೆಸಿದರು. ಸಿಎಂ ಹೆಸರಿನಲ್ಲಿ ತನಗೆ ಮತ್ತು ತನ್ನ ಅನುಯಾಯಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಪ್ರತಿಭಟಿಸಿದರು, ಮಧ್ಯರಾತ್ರಿಯ ನಂತರವೂ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದ ಮನೋಜ್, ಪೊಲೀಸ್ ಅಧಿಕಾರಿಗಳು ತನ್ನನ್ನು ಏಕೆ ಹಿಂಬಾಲಿಸುತ್ತಿದ್ದಾರೆಂದು ವಿವರಿಸಬೇಕೆಂದು ಒತ್ತಾಯಿಸಿದರು.
ಪೊಲೀಸರು ತನ್ನ ಖಾಸಗಿತನವನ್ನು ಉಲ್ಲಂಘಿಸುವುದಿಲ್ಲ ಎಂದು ಭರವಸೆ ನೀಡಿದರೆ ಮಾತ್ರ ತಾನು ಅಲ್ಲಿಂದ ತೆರಳುವುದಾಗಿ ಮನೋಜ್ ಹೇಳಿದ್ದಾರೆ. ಮಂಚು ಮನೋಜ್ ಮಧ್ಯರಾತ್ರಿ ಪೊಲೀಸ್ ಠಾಣೆಗೆ ಹೋಗಿ ಗದ್ದಲ ಸೃಷ್ಟಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.