ತುಮಕೂರು:- ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೇವಲಕೆರೆ ಗ್ರಾಮದಲ್ಲಿ ವ್ಯಕ್ತಿಯನ್ನ ಬರ್ಬರವಾಗಿ ಕೊಂದು 30 ಮೇಕೆಗಳನ್ನ ಆರೋಪಿ ಕದ್ದೊಯ್ದ ಘಟನೆ ಜರುಗಿದೆ.
ನಿದ್ರೆನಾ ತುಂಬಾ ಲೈಕ್ ಮಾಡ್ತೀರಾ!? ಹಾಗಿದ್ರೆ ಈ ರೋಗಗಳು ನಿಮ್ಮ ಬೆನ್ನತ್ತತ್ತೆ ಹುಷಾರ್!
ಕೊಲೆಯಾದ ವ್ಯಕ್ತಿಯನ್ನು 60 ವರ್ಷದ ನರಸಿಂಹಪ್ಪ ಎಂದು ಗುರುತಿಸಲಾಗಿದ್ದು, ಮಣಿಕಂಠ ಎಂಬಾತನಿಂದ ದುಷ್ಕೃತ್ಯ ನಡೆದಿದೆ. 30ಮೇಕೆಗಳಿಗಾಗಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಕೊಲೆ ಬಳಿಕ 30 ಮೇಕೆಗಳನ್ನ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕುರಿಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ್ದಾನೆ.
ಮೇಕೆ ಮತ್ತು ನರಸಿಂಹಪ್ಪ ಮನೆಗೆ ಬಾರದಿದ್ದಕ್ಕೆ ಅನುಮಾನದಿಂದ ಹಿರಿಯೂರು ಸಂತೆಯಲ್ಲಿ ನರಸಿಂಹಪ್ಪ ಪುತ್ರ ಚೆಕ್ ಮಾಡಿದ್ದರು. ಈ ವೇಳೆ ಮೇಕೆಗಳ ಸಮೇತ ಸಂತೆಯಲ್ಲಿ ಮಣಿಕಂಠ ಸಿಕ್ಕಿಬಿದ್ದಿದ್ದಾನೆ. ತಕ್ಷಣ ಮಣಿಕಂಠನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ವೇಳೆ ಮೇಕೆಗಳಿಗಾಗಿ ಕೊಲೆ ಮಾಡಿರುವುದಾಗಿ ಮಣಿಕಂಠ ಬಾಯಿ ಬಿಟ್ಟಿದ್ದಾನೆ.