ಧಾರವಾಡ: ಕೊಟ್ಟಿದ ಸಾಲದ ಹಣವನ್ನು ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಧಾರವಾಡದ ತಾಲೂಕಿನ ಉಪ್ಪಿನ ಬೆಟಗೇರಿ ಹಾಗೂ ಹಾರೋ ಬೆಳವಡಿ ಒಳರಸ್ತೆಯಲ್ಲಿ ನಡೆದಿದೆ.
ಹೌದು ಕೇವಲ 30 ಸಾವಿರಕ್ಕಾಗಿ ಕಳೆದ ದಿನ ರಾತ್ರೋರಾತ್ರಿ ವ್ಯಕ್ತಿಯ ಕೊಲೆ ಮಾಡಲಾಗಿದ್ದು ತಡಕೋಡ್ ಗ್ರಾಮದ ಸುರೇಶ ದೇವರಹೊರು (42) ಎಂಬಾತನನ್ನು ಶಿವಪ್ಪ ಬಡಗೇರಿ ಎಂಬುವರು ಕೊಲೆ ಮಾಡಲಾಗಿದೆ.
ಹತ್ಯೆಯಾದ ಸುರೇಶ ಕೊಲೆ ಆರೋಪಿಗೆ 60 ಸಾವಿರ ಹಣ ಸಾಲವಾಗಿ ಕಟ್ಟಿದ್ದನಂತೆ ಸುರೇಶನಿಗೆ 30 ಸಾವಿರ ಸಾಲದ ಹಣ ಮರಳಿ ಕೊಟ್ಟಿದ ಕೊಲೆ ಆರೋಪಿ ಶಿವಪ್ಪ ಆದರೆ ಇನ್ನೂಳಿದ 30 ಸಾವಿರ ಹಣ ವಿಚಾರವಾಗಿ ಇಬ್ಬರಲ್ಲಿ ಕಿರಿಕ್ ಉಂಟಾಗಿದೆ ಅಲ್ಲದೆ ಆಗ್ಗಾಗ್ಗೆ ಸುರೇಶ ಹಣ ಮರಳಿಸುವಂತೆ ಶಿವಪ್ಪನ ಬೆನ್ನು ಬಿದಿದ್ದ ಇದನ್ನೇ ನೆಪಮಾಡಿಕೊಂಡ ಕೊಲೆ ಆರೋಪಿ ಶಿವಪ್ಪ, ಸುರೇಶವನ್ನು ಹಣ ಕೊಡುವುದಾಗಿ ಕರೆಯಿಸಿ ಹತ್ಯೆ ಮಾಡಿದ್ದಾನೆ.
ರಾಡ್ನಿಂದ ಹೊಡೆದು ಹತ್ಯೆ ಮಾಡಿದ ಆರೋಪಿ ಸುರೇಶ ಕೊಲೆಯ ನಂತರ ಅಪಘಾತವೆಂದು ಬಿಂಬಸಲು ಯತ್ನ ಗರಗ ಠಾಣೆಯ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು ಆಗಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.