ಶಿವಮೊಗ್ಗ: ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಮುಳುಗುವುದರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿಗೆ ಖಂಡನಾರ್ಹ, ಅವರು ಕೂಡಲೆ ಈ ಕುರಿತು ದೇಶದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಆಗ್ರಹಿಸಿದರು.
ಇದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಈ ಹಿಂದೆ ಮಹಾತ್ಮ ಗಾಂಧಿಯವರು ಗೋವುಗಳನ್ನು, ಮಹಿಳೆಯರನ್ನು ಹಾಗೂ ಗಂಗೆಯನ್ನು ನಾವು ದೇವರ ರೂಪದಲ್ಲಿ ಕಾಣಬೇಕು ಎಂದಿದ್ದರು. ಆದರೆ ಮಲ್ಲಿಕಾರ್ಜುನ್ ಖರ್ಗೆ ಇಂತಹ ಹೇಳಿಕೆಯನ್ನು ನೀಡಿ ಗಾಂಧೀಜಿ ಯವರಿಗೆ ಅಪಮಾನ ಮಾಡಿದ್ದಾರೆ.
ವಾಟ್ಸಾಪ್ʼನಲ್ಲಿ ಫೇಕ್ ನಂಬರ್ ಪತ್ತೆ ಮಾಡುವುದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಖರ್ಗೆಯವರೆ ಡಿ ಕೆ ಶಿವಕುಮಾರ್ ಸೇರಿದಂತೆ ನಿಮ್ಮ ಪಕ್ಷದ ಅನೇಕ ಜನ ನಾಯಕರು ಪ್ರಯಾಗ್ರಾಜ್ನ ಕುಂಭಮೇಳಕ್ಕೆ ಹೋಗಿ ಮಿಂದೆದ್ದಿದ್ದಾರೆ. ಅವರ ವಿರುದ್ದ ನೀವು ಯಾವು ರೀತಿಯ ಕೈಗೊಳ್ಳುತ್ತೀರಾ ಎಂದು ಪ್ರಶ್ನಿಸಿದರು. ಖರ್ಗೆಯವರೆ ನೀವು ಈ ರೀತಿಯ ಹೇಳಿಕೆಯನ್ನು ಕೊಡುವುದು ತಪ್ಪು. ಈ ಹಿನ್ನಲೆ ದೇಶದ ಜನರಲ್ಲಿ ಕ್ಷಮೆ ಕೇಳಬೇಕೆಂದು ಕೆಎಸ್ ಈ ಶ್ವರಪ್ಪ ಆಗ್ರಹಿಸಿದರು