ಮಾಲಾಶ್ರೀ ಮಗಳು ಆರಾಧನ ಕಾಟೇರ ಸಿನಿಮಾ ಮೂಲಕ ಹೆಸರು ಮಾಡಿದವರು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿ ಆರಾಧನಾ ರಾಮ್ ಆಗಾಗ ವಿಡಿಯೋ ಹಾಗೂ ರೀಲ್ಸ್ಗಳನ್ನು ಶೇರ್ ಮಾಡುತ್ತಾ ಇರುತ್ತಾರೆ. ಆರಾಧನಾ ರಾಮ್ ಹಿಂದಿ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ. ಝುಮುಕ, ಝುಮುಕ ಅಂತ ಸೊಂಟ ಕುಣಿಸಿದ್ದಾರೆ. ಬ್ಲ್ಯಾಕ್ ಡ್ರೆಸ್ ಧರಿಸಿ ಸೊಂಟಕ್ಕೆ ಬಟ್ಟೆ ಕಟ್ಟಿಕೊಂಡು ಬಳ್ಳಿಯಂತೆ ಬಳುಕಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ದಿಗೆ ಬಜೆಟ್ನಲ್ಲಿ ವಿಶೇಷ ಆದ್ಯತೆ ನೀಡಲು ಒತ್ತಾಯ: ಅರವಿಂದ ಬೆಲ್ಲದ
ನಟಿ ಆರಾಧನಾ ರಾಮ್ ಅವರ ಮಸ್ತ್ ಡ್ಯಾನ್ಸ್ಗೆ ಲೈಕ್ಗಳ ಸುರಿಮಳೆ ಆಗ್ತಿದೆ. ಜೊತೆಗೆ ನಾನಾ ಕಮೆಂಟ್ ಗಳು ಕೂಡ ಹರಿದು ಬರ್ತಿದೆ. ನಿಮಗೆ ಕನ್ನಡ ಹಾಡು ಸಿಗಲಿಲ್ವಾ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಯಾರು ಏನೇ ಹೇಳಿದ್ರು ಮಾಲಾಶ್ರೀ ಮಗಳು ಸೂಪರ್ ಅಂತಿದ್ದಾರೆ ಫ್ಯಾನ್ಸ್.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳ ಮೂಲಕ ಅನೇಕ ಹೊಸ ನಟಿಯರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಲಿಸ್ಟ್ನಲ್ಲಿ ಆರಾಧನಾ ರಾಮ್ ಸೇರಿದ್ದಾರೆ. ಮೊದಲ ಸಿನಿಮಾದಲ್ಲೇ ಭರ್ಜರಿ ಹಿಟ್ ಗಳಿಸಿದ್ರು. ಡ್ರೀಮ್ ಗರ್ಲ್ ನಟಿ ಮಾಲಾಶ್ರೀ ಮಗಳು ಆರಾಧನಾ ಕನ್ನಡದ ಭರವಸೆಯ ನಟಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿ ಆರಾಧನಾ ರಾಮ್, ಚೆಂದದ ಫೋಟೋ ಹಾಗೂ ವಿಡಿಯೋ ಶೇರ್ ಮಾಡ್ತಾರೆ.
ಸ್ಯಾಂಡಲ್ವುಡ್ನ ಕನಸಿನ ರಾಣಿ ಎಂದೆ ಕರೆಸಿಕೊಳ್ಳುವ ಮಾಲಾಶ್ರೀ ಮಗಳು ಆರಾಧನಾ ಅಂದದಲ್ಲಿ ಅಮ್ಮನನ್ನು ಮೀರಿಸುವಂತಿದ್ದಾರೆ. ಆರಾಧನಾ ಬ್ಯೂಟಿಗೆ ಈಗಾಗಲೇ ಫ್ಯಾನ್ಸ್ ಫಿದಾ ಆಗಿದ್ದಾರೆ.