ಧಾರವಾಡ: ವ್ಯಾಟ್ಸ್ ಆ್ಯಫ್ನಲ್ಲಿ ಕಮ್ಯೂನಿಟಿಯಲ್ಲಿ ಹೋಲ್ ಸೇಲ್ ಬಟ್ಟೆ ಪೂರೈಸುವುದಾಗಿ ನಂಬಿಸಿ ರಿಟೇಲ್ ಬಟ್ಟೆ ವ್ಯಾಪಾರಿಯೊಬ್ಬರಿಗೆ ಮುಂಬೈ ಮೂಲದ ವ್ಯಕ್ತಿಯೊಬ್ಬ ಧಾರವಾಡ ವ್ಯಾಪಾರಿಗೆ ಬರೊಬ್ಬರಿ 1ಲಕ್ಷ16 ಸಾವಿರ ರೂಪಾಯಿ ಮಕ್ಮಲ್ ಟೋಪಿ ಹಾಕಿರುವ ಘಟನೆ ನಡೆದಿದೆ. ಧಾರವಾಡ ನಿವಾಸಿ ಮಹಾಂತೇಶ ಪಟ್ಟಣ ಶೆಟ್ಟಿ ಎಂಬ ಬಟ್ಟೆ ವ್ಯಾಪಾರಿಯೇ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ.
ನಗರದ ಸಂಗಮ ವೃತ್ತದಲ್ಲಿ ಬಟ್ಟೆ ಅಂಗಡಿ ಹೊಂದಿರುವ ಮಹಾಂತೇಶ ಅವರಿಗೆ ಮುಂಬೈ ಮೂಲದ ವ್ಯಕ್ತಿ ಪರಿಚಯ ವಾಗಿದ್ದ. ತಾನು ಹೋಲ್ ಸೇಲ್ ಬಟ್ಟೆ ಪೂರೈಸುವುದಾಗಿ ಮನೀಶ ಎಂಬ ಹೆಸರಿನಿಂದ ಪರಿಚಯವಾಗಿ, ಹೋಲ್ ಸೇಲ್ ವ್ಯಾಪಾರಿಯಾಗಿದ್ದೇನೆ ಎಂದು ಮಹಾಂತೇಶನ ನಂಬಿಸಿದ್ದಾನೆ. ನಂಬಿಕ ಬಂದ ಬಳಿಕ ಡಿ. 9 ತಾರೀಖಿನಂದ 20 ನೇ ತಾರೀಖಿನವರೆಗೆ ಹಂತ ಹಂತವಾಗಿ 1ಲಕ್ಷ 16 ಸಾವಿರ 8 ನೂರು ರೂಪಾಯಿ ಹಣವನ್ನು ಪೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾನೆ. ಬಳಿಕ ಒಂದೆರಡು ದಿನದಲ್ಲಿ ಹೋಲ್ ಸೇಲ್ ಬಟ್ಟೆ ಬರುತ್ತೆ ಅಂದುಕೊಂಡಿದ್ದ ಮಾಹಾಂತೇಶಗೆ ಹಣ ಹಾಕಿಸಿಕೊಂಡ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿ ಶಾಕ್ ಕೊಟ್ಟಿದ್ದಾನೆ.
ಇಂದ ನಾಳೆ ನಂಬರ್ ಸ್ವಚ್ ಆನ್ ಆಗಬಹುದು ಎಂದು ಕಾದು ಕಾದು ಸುಸ್ತಾದ ಮಾಹಾಂತೇಶ, ಮುಂಬೈ ಮೂಲದ ಮನೀಶ ಹೆಸರು ಹಾಗೂ ಅಗತ್ಯ ದಾಖಲೆಯೊಂದಿಗೆ ಈಗ ಸೈಬರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಸದ್ಯ ದೂರು ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೆ ಮಾಹಾಂತೇಶ ಕೂಡಾ ಆನ್ ಲೈನ್ ಮೂಲಕಹೋಲ್ ಸೇಲ್ ದರದಲ್ಲಿ ತನ್ನ ಬಟ್ಟೆ ಅಂಗಡಿಗೆ ಬೇರೆ ಬೇರೆ ಕಡೆಯಿಂದ ಬಟ್ಟೆ ಬುಕ್ ಮಾಡಿ ತರಿಸಿಕೊಳ್ಳುತ್ತಿದ್ದಾ. ಇವರು ಕೂಡಾ ಹಾಗೇ ಇರಬೇಕು ನಂಬಿ ಈಗ ವಂಚನೆಗೆ ಒಳಗಾಗಿದ್ದಾರೆ.