ಕೆ.ಆರ್.ಪುರ: ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿಗೆ ಮೀಸಲಾತಿ ಹೆಚ್ಚು ಅವಶ್ಯಕವಾಗಿದ್ದು ಸಮಾಜದ ಏಳಿಗೆಗೆ ಮೀಸಲಾತಿ ಕಲ್ಪಿಸುವಂತೆ ಶ್ರೀ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದ ಸ್ವಾಮಿಜಿಗಳು ಆಗ್ರಹಿಸಿದರು.
ಕೋಳಿ ತಿಂದ ಶ್ವಾನ: ಶೆಡ್ ನಲ್ಲಿ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ನೆರೆಮನೆ ಯುವಕ!
ಕೆ.ಆರ್.ಪುರದಲ್ಲಿ ಶ್ರೀವಾಲ್ಮೀಕಿ ಜನಕಲ್ಯಾಣ ಕೋ ಆಪರೇಟಿವ್ ಸೋಸೈಟಿ ಉದ್ಘಾಟಿಸಿ ಅವರು ಮಾತನಾಡಿದರು,
ವಾಲ್ಮೀಕಿ ಸಮಾಜ ನಾಡಿಗೊಸ್ಕರ ತ್ಯಾಗ ಬಲಿದಾನಗಳನ್ನು ಮಾಡಿದೆ. ನಾಡಿನ ರಕ್ಷಣೆಗಾಗಿ ಮದಕರಿ ನಾಯಕ ಸೇರಿದಂತೆ ಸಮುದಾಯದ ನಾಯಕರು ಪ್ರಾಣವನ್ನು ನಾಡಿಗಾಗಿ ತ್ಯಾಗಮಾಡಿದ್ದಾರೆ ಇಂತಹ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಮಾತನಾಡಿ, ಮಹರ್ಷಿ ವಾಲ್ಮೀಕಿಯರ ಹೆಸರಲ್ಲಿ ಸೊಸೈಟಿ ಸ್ಥಾಪನೆಯಾಗಿರುವುದು ಖುಷಿಯ ವಿಚಾರವಾಗಿದ್ದು, ತಳ ಸಮುದಾಯವಾದ ನಾಯಕ ಸಮಾಜ ಬಡವರಿಗೆ ಅನೂಕೂಲವಾಗುವಂತೆ ಸಹಕಾರ ಸಂಘ ಕೆಲಸಮಾಡಲಿ, ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೆರವು ನೀಡಲಿ ಎಂದು ಆಶಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ರಾಜಣ್ಣ, ಶಾಸಕರಾದ ಬಸವರಾಜ, ಮಾಜಿ ಶಾಸಕ ಶ್ರೀರಾಮುಲು, ಸಂಘದ ಅಧ್ಯಕ್ಷ ಬಾಕ್ಸರ್ ನಾಗರಾಜ್, ನಿರ್ದೇಶಕರಾದ ಎಂ. ಮಂಜುನಾಥ, ಕಟ್ಟುಗೊಲ್ಲಹಳ್ಳಿ ಟಿ. ಶಿವಕುಮಾರ್,ನಾಗರಾಜ್, ಜಿ.ಕೆ.ನಾಗೇಶ್ ಇದ್ದರು