ಚಾಮರಾಜನಗರ:- ಮಕರ ಸಂಕ್ರಾಂತಿಯಂದು ಹುಲುಗನಮುರುಡಿ ರಥೋತ್ಸವ ಬಹಳ ವಿಜೃಂಭಣೆಯಿಂದ ಜರುಗಿದೆ. ದಕ್ಷಿಣ ಶೇಷಾದ್ರಿ ಎನಿಸಿದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯಲ್ಲಿರುವ ಹುಲಗನಮುರಡಿ ಬೆಟ್ಟದಲ್ಲಿ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದು, ರಥೋತ್ಸವ ಸಂಭ್ರಮ ಮನೆ ಮಾಡಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ವರ್ಷದ ಮೊದಲನೇ ಜಾತ್ರೆ ಇದಾಗಿದ್ದು, ವಿಜೃಂಭಣೆಯಿಂದ ಜರುಗಿದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿದರು. ರಥಕ್ಕೆ ಹಣ್ಣು ಧವನ ಎಸೆದು ಪೂಜೆ ಸಲ್ಲಿಕೆ ಮಾಡಲಾಗಿದ್ದು, ತಿರುಪತಿಗೆ ಹೋಗಲಾರದವರು ಹುಲಗನಮುರಡಿ ವೆಂಕಟರಮಣನ ದರ್ಶನ ಮಾಡಿದರೆ ತಿರುಪತಿಗೆ ಹೋದಷ್ಟೆ ಪುಣ್ಯ ಎಂಬ ನಂಬಿಕೆ ಇದೆ.
ರಾಜ್ಯದ ವಿವಿಧೆಡೆ ಹಾಗು ನೆರೆಯ ತಮಿಳುನಾಡಿನಿಂದ ಅಸಂಖ್ಯಾತ ಭಕ್ತರು ಆಗಮಿಸಿದ್ದಾರೆ.