ಧಾರವಾಡ- ರೈತರ ಪಾಲಿನ ಸುಗ್ಗಿ ಹಬ್ಬ ಹಾಗೂ ವರ್ಷದ ಮೊದಲ ಹಬ್ಬವಾದ ಸಂಕ್ರಮಣ ಹಬ್ಬವನ್ನು ಧಾರವಾಡ ತಾಲೂಕಿನ ಶಿರೂರು ಗ್ರಾಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಸಂಕ್ರಮಣ ಹಿನ್ನೆಲೆಯಲ್ಲಿ ಗ್ರಾಮದ ಬಾಲಲೀಲ ಸಂಗಮೇಶ್ವರನಿಗೆ ಮುಂಜಾನೆಯಿಂದ ವಿಶೇಷ ಪೂಜೆಗಳು ನೇರವೆರಿದ್ದು, ಸಹಸ್ರಾರು ಭಕ್ತರು ವಿಶೇಷ ಪೂಜೆ ಸಕ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.
ಇನಾಂಹೊಂಗಲ ವಿರಕ್ತಮಠದ ಶಿದ್ದಲಿಂಗ ಸ್ವಾಮೀಜಿ, ಗರಗ ಗ್ರಾಮ ಕಲ್ಮಠದ ಪ್ರಶಾಂತ ದೇವರು ಅವರ ಸಾನಿಧ್ಯದಲ್ಲಿ ಬಾಲಲೀಲ ಸಂಗಮೇಶ್ವರನ ದೇವಸ್ಥಾನ ಬಳಿಯ ತುಂಬ ಹರಿಯುತ್ತಿದ್ದ ಮಲಪ್ರಭಾ ಕಾಲುವೆಯಲ್ಲಿ ತೇಪೋತ್ಸ ನಡೆಯಿತು.
ತೇಪೋತ್ಸ ವೇಳೆ ಭಕ್ತರೆಲ್ಲರು ಶ್ರೀ ಬಾಲಲೀಲ ಸಂಗಮೇಶ್ವರಕಿ ಜೈ ಎಂಬ ಘೋಷಣೆ ಕೂಗಿ ದೇವರ ಕೃಪೆಗೆ ಪಾತ್ರರಾದರು. ಇನ್ನೂ ತೇಪೋತ್ಸವ ಕಾರ್ಯಕ್ರಮದಲ್ಲಿ ನವಲಗುಂದ ಸೇರಿದಂತೆ ಅಕ್ಕ ಪಕ್ಕದ ತಾಲೂಕಿನ ಗ್ರಾಮಸ್ಥರೆಲ್ಲರು ಭಾಗಿಯಾಗಿ ಇಷ್ಟಾರ್ಥ ಸುದ್ಧಗೆ ಪ್ರಾರ್ಥಿಸಿಕೊಂಡರು.