ಬೆಂಗಳೂರು: ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಹೊರವಲಯದಲ್ಲಿ ರಸ್ತೆಯಲ್ಲಿ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಕಾರು ಅಪಘಾತಕ್ಕೀಡಾಗಿತ್ತು. ಬೈಕ್ ಸವಾರನೋರ್ವ ಭವಾನಿ ರೇವಣ್ಣ ಕಾರಿಗೆ ಡಿಕ್ಕಿ ಹೊಡೆದಿದ್ದ. ಈ ವೇಳೆ ಕಾರಿನಿಂದ ಇಳಿದ ಭವಾನಿ ರೇವಣ್ಣ ರೌದ್ರರೂಪ ತಾಳಿದ್ರು. ಡಿಕ್ಕಿ ಹೊಡೆದ ಬೈಕ್ ಸವಾರನ ಪರಿಸ್ಥಿತಿ ಹೇಗಿದೆ ಅಂತ ವಿಚಾರಿಸೋ ವ್ಯವಧಾನವೂ ತೋರದೇ ಕಾರಿಗೆ ಏನಾಗಿದೆ ಅನ್ನೋ ವಿಮರ್ಷೆಗೆ ಇಳಿದಿದ್ರು.. ಕೋಟಿ ರೂಪಾಯಿ ಕಾರು ಅಂತ ಬಾಲ ಸುಟ್ಟ ಬೆಕ್ಕಿನಂತ ಕಾರಿನ ಸುತ್ತ ಓಡಾಡುತ್ತಾ ಬೈಕ್ ಸವಾರನಿಗೆ ಹಿಡಿಶಾಪ ಹಾಕಿದ್ರು.ಸಾಯೋಕೆ ನನ್ನ ಕಾರೇ ಬೇಕಿತ್ತಾ..
ಬಸ್ಸಿಗೆ ಗಿಸ್ಸಿಗೆ ಸಿಕ್ಕಾಂಡೊಂಡ್ ಸಾಯಬೇಕಿತ್ತು.. ಒಂದೂವರೆ ಕೋಟಿ ರೂಪಾಯಿ ಗಾಡಿ ಇದು. ಹೀಗೆ ಭವಾನಿ ರೇವಣ್ಣ ಆಡಿದ ಒಂದೊಂದು ಮಾತುಗಳು ಅವರ ಅಸಲಿ ಮುಖವನ್ನ ಕಳಚಿಟ್ಟಂತಿತ್ತು. ಬೈಕ್ ಸವಾರ ರಕ್ತಸ್ರಾವದಿಂದ ಬಳಲ್ತಾ ಇದ್ರೂ ತನ್ನ ಕಾರನ್ನೇ ನೋಡಿ ಮರುಕ ಪಟ್ಟ ಭವಾನಿ ರೇವಣ್ಣ ನಡೆ ಎಂತವರನ್ನೂ ತಲೆತಗ್ಗಿಸುವಂತಿತ್ತು.ದೊಡ್ಡಗೌಡರ ಕುಟುಂಬದ ಹಿರಿಯ ಸೊಸೆಯೊಬ್ರು ನಡುರಸ್ತೆಯಲ್ಲಿ ಹೀಗೆ ಮಾನವೀಯತೆ ಮರೆತು ವರ್ತಿಸಿದ್ದು ಎಲ್ಲರನ್ನೂ ಆಕ್ರೋಶಗೊಳಿಸಿತ್ತು. ಚುನಾವಣೆ ಹೊತ್ತಲ್ಲಿ ಜನರೇ ದೇವರು ಅಂತಿದ್ದ ಭವಾನಿ ರೇವಣ್ಣ ಈ ರೀತಿ ನಡೆದುಕೊಂಡಿದ್ದು ದೊಡ್ಡಗೌಡರ ಕುಟುಂಬಕ್ಕೆ ಕಳಂಕ ಅಂಟಿಸಿದಂತಿತ್ತು. ಆದ್ರೆ ಇದೇ ಪ್ರಕರಣಕ್ಕೆ ಮೇಜರ್ ಟ್ವಿಸ್ಸ್ ಸಿಕ್ಕಿದೆ.
Mumbai 26/11 Attacks: ಪಾಕ್ ಜೈಲಿನಲ್ಲೇ ವಿಷ ಪ್ರಾಶನಕ್ಕೆ ತುತ್ತಾಗಿರುವ ಮೋಸ್ಟ್ ವಾಂಟೆಡ್ ಉಗ್ರ..!
ಕಾರು ಆಕ್ಸಿಡೆಂಟ್ ಆದ ಸಂದರ್ಭದಲ್ಲಿ ಭಾವನಿ ರೇವಣ್ಣ ಎಲ್ಲೂ ನನ್ನ ಸ್ನೇಹಿತನ ಕಾರು ಎಂದು ಹೇಳಿಲ್ಲ. ಮಗ ಸುರಾಜ್ ರೇವಣ್ಣ ಸಹ ಮೊದಲು ತನ್ನ ತಾಯಿ ಕಾರು ಎಂದೆ ಹೇಳುತ್ತಾರೆ .ಮಾಧ್ಯಮದವರು ಸ್ನೇಹಿತರ ಕಾರಾ? ಎಂದು ಪ್ರಸ್ನಿದಾಗ ಅದು ತನ್ನ ತಾಯಿಯ ಸ್ನೇಹಿತರ ಕಾರು ಎಂದು ಹೇಳುತ್ತಾರೆ.ಅದು ಯಾವ ಸ್ನೇಹಿತರ ಕಾರು ಎಂದು ಹುಡುಕಿದಾಗ ಈ ಕಾರು ಆಫ್ರಾ ಇನ್ಫ ಇಂಜಿನಿಯರಿಂಗ್ ಕಂಪನಿ ಹೆಸರಿನಲ್ಲಿದೆ.ಆ ಕಂಪನಿಯಲ್ಲಿ ನಿರ್ದೇಶಕರಾಗಿರುವ ಅಭಿಜಿತ್ ಅಶೋಕ್ ಅನ್ನುವವರು ಬಿಬಿಎಂಪಿ ಕ್ಲಾಸ್ ಒನ್ ಕಂಟ್ರ್ಯಾಕ್ಟರ್ ಆಗಿದ್ದಾರೆ.
ಹಾಗಾಗಿ ಈ ಕಾರು ಕಂಟ್ರ್ಯಾಕ್ಟರ್ ಗಳಿಂದ ಭಾವನಿ ರೇವಣ್ಣ ಅವರಿಗೆ ಗಿಫ್ಟ್ ಆಗಿ ಬಂದಿದ್ಯಾ? ಅನ್ನುವ ಅನುಮಾನ ಕಾಡುತ್ತಿದೆ.ಜೊತೆಗೆ ಬೇನಾಮಿ ಹೆಸರಿನಲ್ಲಿ ಭವಾನಿ ರೇವಣ್ಣ ಕಾರು ಖರೀದಿಸಿದ್ದಾರೆ ಎನ್ನುವ ಅನುಮಾನ ಇದೆ .ಈ ಬಗ್ಗೆ IT ಡಿಪಾರ್ಟ್ಮೆಂಟ್ ತನಿಖೆ ನಡೆಸಬೇಕಿದೆ.ದೇವೇ ಗೌಡರ ಕುಟುಂಬಕ್ಕೆ ಬೇರೆ ಯಾರೋ ಸ್ನೇಹಿತರ ಕಾರು ಕೊಡಿಸುವಷ್ಟು ಬಡತನ ಇಲ್ಲ.ಇದಕ್ಕಿಂತ ದೊಡ್ಡ ದೊಡ್ಡ ಕಾರುಗಳು ಅವರ ಹತ್ರ ಇದೆ ಹಾಗಿದ್ರು ಸ್ನೇಹಿತರ ಕಾರನ್ನು ಕೊಡಿಸಿದ್ರಾ ?ಬಿಬಿಎಂಪಿಯಲ್ಲಿ ಪಡೆದ ಕೆಲಸಗಳಿಗೆ ಗಿಫ್ಟ್ ಆಗಿ ಭಾವನಿ ರೇವಣ್ಣ ಅವರಿಗೆ ಒಂದೂ ವರೆ ಕೋಟಿ ಕಾರು ನೀಡಲಾಯ್ತಾ ಅನ್ನೋ ಈ ಬಗ್ಗೆ ತನಿಖೆ ಆಗ ಬೇಕು ಅಂತ ಸಾಮಾಜಿಕ ಕಾರ್ಯಕರ್ಯ ಆಗ್ರಹಿಸಿದ್ದಾರೆ