ಬೆಂಗಳೂರು:- ಬಿಜೆಪಿ- ಜೆಡಿಎಸ್ ಮೈತ್ರಿ ನಾಯಕರ ಮೈಸೂರು ಚಲೋ ಪಾದಯಾತ್ರೆ ಏನೊ ಮುಗಿದೋಯ್ತು. ಇದಾದ್ಮೇಲೆ ಕಮಲಪಡೆಯ ಬಂಡಾಯದ ಭೇಗುದಿ ಸ್ಪೋಟಗೊಂಡಿದೆ, ದಕ್ಷಿಣ ಪಾದಯಾತ್ರೆಗೆ ಠಕ್ಕರ್ ಕೊಡಲು ಬಿಜೆಪಿಯ ಅಸಮಾಧಾನಿತ ನಾಯಕರು ಉತ್ತರ ಪಾದಯಾತ್ರೆಗೆ ಡೇಟ್ ಫಿಕ್ಸ್ ಮಾಡಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೇ ಬಂಡಾಯದ ಸಮರ ಸಾರಿದ್ದಾರೆ, BYV ವಿರೋಧಿ ಟೀಂ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು ಬೆಳಗಾವಿ ಸಾಹುಕಾರ್, ರೆಬಲ್ ಯತ್ನಾಳ್ ಕಮಲಪಡೆಯ ರೆಬಲ್ ನೇತೃತ್ವ ವಹಿಸ್ತಿದ್ದಾರೆ……..
Almonds Intake: ನಿತ್ಯ ಬಾದಾಮಿ ಸೇವಿಸುತ್ತಿದ್ದೀರಾ? ದಿನಕ್ಕೆ ಎಷ್ಟು ತಿಂದರೆ ಉತ್ತಮ?
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಹಗರಣಗಳನ್ನು ಖಂಡಿಸಿ ಬಿಜೆಪಿ- ಜೆಡಿಎಸ್ ಮೈತ್ರಿ ನಾಯಕರು ಬೆಂಗಳೂರು ಟು ಮೈಸೂರು ಚಲೋ ಪಾದಯಾತ್ರೆ ಮಾಡಿ ಮುಗಿಸಿದ್ದಾರೆ. ಈ ಪಾದಯಾತ್ರೆಗೆ ಬಿಜೆಪಿಯ ರೆಬಲ್ ನಾಯಕರು ಗೈರಾಗಿದ್ರು ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಸನಗೌಡ ಯತ್ನಾಳ್, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿ ಹಲವರು ಹೋರಾಟಕ್ಕೆ ಬರಲೇ ಇಲ್ಲ. ಈ ಟೀಂ ಇದೀಗ ಆ್ಯಕ್ಟೀವ್ ಆಗಿದ್ದು ಇದರ ನೇತೃತ್ವವನ್ನ ಯತ್ನಾಳ್, ಜಾರಕಿಹೊಳಿ ವಹಿಸಿಕೊಂಡಿದ್ದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಏಕಪಕ್ಷೀಯ ಸರ್ವಾಧಿಕಾರಿ ಧೋರಣೆ ವಿರುದ್ಧ ಸಿಡಿದೆದ್ದಿದೆ ರೆಬಲ್ ಟೀಂ…..
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಟೀಂ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಇಂದು ಮಹತ್ವದ ಸಭೆ ನಡೆಸಿತು. ಮೀಟಿಂಗ್ ನಲ್ಲಿ ಯತ್ನಾಳ್, ರಮೇಶ್ ಜಾರಕಿಹಿಳಿ, ಅರವಿಂದ ಲಿಂಬಾವಳಿ, ಜಿಎಂ ಸಿದ್ದೇಶ್ವರ್, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ ಸೇರಿ 12ಕ್ಕೂ ಹೆಚ್ಚು ಮುಖಂಡರು ಭಾಗಿಯಾದ್ರು. ಮಹರ್ಷಿ ವಾಲ್ಮೀಕಿ ನಿಗಮದ ಹಗರಣ, SC-ST ಅನುದಾನ ದುರ್ಬಳಕೆಗೆ ವಿರೋಧಿಸಿ ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಲು ರೆಬಲ್ ಟೀಂ ನಿರ್ಧಾರ ಮಾಡಿದೆ. ಮುಡಾ ಹೋರಾಟ ಕೇವಲ ಮೈಸೂರಿಗೆ ಮಾತ್ರ ಸೀಮಿತ ಹೋರಾಟ, ವಾಲ್ಮೀಕಿ, SC- ST ಹಣ ದುರ್ಬಳಕೆ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು ಹೀಗಾಗಿ ಸೆಪ್ಟೆಂಬರ್ 17 ರಿಂದ ಉತ್ತರ ಪಾದಯಾತ್ರೆ ಆರಂಭಿಸಲು ರೆಬಲ್ ಟೀಂ ಡೇಟ್ ಫಿಕ್ಸ್ ಮಾಡಿದೆ….
ಇನ್ನು ಸಭೆ ನಂತರ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಯಾವನೋ ಒಬ್ಬನನ್ನ ಹಿರೋ ಮಾಡಲು ನಮ್ಮ ಹೋರಾಟ ಅಲ್ಲ ಅನ್ನೋ ಮೂಲಕ ನೇರವಾಗಿ ವಿಜಯೇಂದ್ರಗೆ ಟಾಂಗ್ ಕೊಟ್ರು ಯತ್ನಾಳ್.
ನಮ್ಮ ಸಭೆಯನ್ನು ಭಿನ್ನಮತೀಯ ಚಟುವಟಿಕೆ, ಅತೃಪ್ತರ ಸಭೆ ಎಂದು ಬಿಂಬಿಸಲಾಗ್ತಿದೆ, ನಮ್ಮದು ಬಿಜೆಪಿ ಬಲವರ್ಧನೆಯ ಸಭೆ. ರಾಜ್ಯದಲ್ಲಿ ಮುಂಬರುವ ಚುನಾವಣೆ ದೃಷ್ಟಿಯಿಂದ ಬಿಜೆಪಿ ಗಟ್ಟಿಗೊಳಿಸುವ ಕೆಲಸ ಮಾಡ್ತಿದ್ದೇವೆ, ನಮ್ಮಲ್ಲಿರುವ ದೋಷಗಳನ್ನು ಸರಿಪಡಿಸಿಕೊಂಡು ಪಕ್ಷ ಬಲಪಡಿಸಲು ಚರ್ಚೆಗಳಾಗ್ತಿವೆ.
ನಮ್ಮ ಸಲಹೆಗಳನ್ನು ಹೈಕಮಾಂಡ್ಗೆ ತಿಳಿಸಬೇಕಿದೆ
ಇಂದಿನ ಸಭೆಯಲ್ಲಿ 12 ಜನ ಇದ್ದೇವೆ.ನಮ್ಮ ಸಂಖ್ಯೆ ಕಡಿಮೆ ಮಾಡಬೇಡೋಕೆ ಹೋಗಬೇಡಿ ಅಂತ ವಿಜಯೇಂದ್ರಗೆ ಟಾಂಗ್ ಕೊಟ್ಟಿದ್ದಾರೆ ಅತೃಪ್ತ ನಾಯಕರು…
ರೆಬಲ್ಸ್ ಹೋರಾಟದ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಯಾವಾಗ ಸಭೆ ಮಾಡ್ತಿದಾರೆ ಅಂತ ನನಗೆ ಗೊತ್ತಿಲ್ಲ. ಎಲ್ಲಿ ಸಭೆ ಮಾಡ್ತಿದಾರೆ ಅನ್ನೋದರ ಮಾಹಿತಿಯೂ ಇಲ್ಲ,
ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಉಸ್ತುವಾರಿಗಳು ಮತ್ತು ರಾಜ್ಯಾಧ್ಯಕ್ಷರು ನೋಡಿಕೊಳ್ತಾರೆ. ಯತ್ನಾಳ್ ರಮೇಶ್ ಜಾರಕಿಹೊಳಿ ಮತ್ತಿತರರ ಜೊತೆ ಬಿಜೆಪಿ ಹೈಕಮಾಂಡ್ ಮಾತನಾಡುತ್ತೆ ಎಲ್ಲವನ್ನೂ ಬಗೆಹರಿಸ್ತಾರೆ ಎಂದಿದ್ದಾರೆ ಜೋಷಿ….
ಒಟ್ನಲ್ಲಿ ಬಿಜೆಪಿಯ ರೆಬಲ್ ಟೀಂ ಈವರೆಗೆ ವಿಜಯೇಂದ್ರ ವಿರುದ್ಧ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್, ಸರ್ವಾಧಿಕಾರಿ ಧೋರಣೆ ಅಂತ ಆರೋಪ ಮಾಡ್ತಿತ್ತು. ಈ ವಿಚಾರ ಹೈಕಮಾಂಡ್ ಗಮನಕ್ಕೂ ತಂದಿತ್ತು ಅದನ್ನ ಹೈಕಮಾಂಡ್ ಗಮನಿಸದಿದ್ದಕ್ಕೆ ಯಡಿಯೂರಪ್ಪ ಕುಟುಂಬದ ವಿರುದ್ಧ ದೊಡ್ಡ ಹೋರಟಕ್ಕೆ ಕರೆ ಕೊಟ್ಟಿದೆ. ಕಮಲಪಡೆಯ ಆಂತರಿಕ ಕಲಹ ಪಕ್ಷಕ್ಕೆ ಡ್ಯಾಮೇಜ್ ಮಾಡೋದಂತೂ ಪಕ್ಕಾ ಇದನ್ನ ವಿಜಯೇಂದ್ರ ಹಾಗೂ ಹೈಕಮಾಂಡ್ ಯಾವ ರೀತಿಯಾಗಿ ತೆಗೆದುಕೊಳ್ತಾರೆ ಇದರಿಂದ ಆಗೋ ಇಂಪ್ಯಾಕ್ಟ್ ಏನು ಅನ್ನೋದನ್ನ ಕಾದುನೋಡಬೇಕಿದೆ….