ನವದೆಹಲಿ: ಪ್ರಶ್ನೆಗಾಗಿ ನಗದು ಪಡೆದು ಪ್ರಕರಣದಲ್ಲಿ ಸಂಸತ್ ಸ್ಥಾನದಿಂದ ಉಚ್ಛಾಟನೆಗೊಂಡಿರುವ ಟಿಎಂಸಿ (TMC) ನಾಯಕಿ ಮಹುವಾ ಮೊಯಿತ್ರಾ (Mahua Moitra) ಅರ್ಜಿಯನ್ನು ಜನವರಿ 3ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಉಚ್ಛಾಟನೆಯನ್ನು ಪ್ರಶ್ನೆ ಮಾಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ (Snajeev Khanna) ನೇತೃತ್ವ ಪೀಠ ಪ್ರಕರಣದ ಬಗ್ಗೆ ಅಧ್ಯಯನ ಮಾಡಲು ಸಮಯ ಸಿಕ್ಕಿಲ್ಲ ಎಂದು ಹೇಳಿದೆ.
ಇತರೆ ಹಲವು ಪ್ರಕರಣಗಳ ಅರ್ಜಿಗಳನ್ನು ಅಧ್ಯಯನ ಮಾಡಬೇಕಿದ್ದು, ಈ ಪ್ರಕರಣದ ಫೈಲ್ ಅನ್ನು ಓದಲು ನನಗೆ ಸಮಯ ಸಿಕ್ಕಿಲ್ಲ. ಹೀಗಾಗಿ ವಿಚಾರಣೆ ದಿನಾಂಕ ಬದಲಾಯಿಸಲಾಗುತ್ತಿದೆ. ಜನವರಿ 3 ರಂದು ವಿಚಾರಣೆ ನಡೆಸುವುದಾಗಿ ವಿಚಾರಣೆ ವೇಳೆ ನ್ಯಾ. ಸಂಜೀವ್ ಖನ್ನಾ ಹೇಳಿದರು.
ಡಿಸೆಂಬರ್ 22ಕ್ಕೆ ಕಲಾಪ ಅಂತ್ಯವಾಗುತ್ತಿರುವ ಹಿನ್ನೆಲೆ ಸುಪ್ರೀಂಕೋರ್ಟ್ (Supreme Court) ಈ ನಿರ್ಧಾರದಿಂದ ಮಧ್ಯಂತರ ರಿಲೀಫ್ ಪಡೆದು ಮಹುವಾ ಮೊಯಿತ್ರಾ ಪ್ರಸಕ್ತ ಅಧಿವೇಶನದಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ