ಬೆಂಗಳೂರು:- ಮಹೇಶ್ವರ ರಾವ್ ಅವರನ್ನು ನಮ್ಮ ಮೆಟ್ರೋ ನೂತನ ಆಡಳಿತ ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಇವರು BMRCLಗೆ ಪೂರ್ಣಾವಧಿ ಎಂ.ಡಿ. ಆಗಿದ್ದಾರೆ. ನಮ್ಮ ಮೆಟ್ರೋ ಫೇಸ್ 2 ಕಾಮಗಾರಿಗಳು ವಿಳಂಬವಾಗುತ್ತಿವೆ. ಇದಕ್ಕೆ ಪೂರ್ಣಾವಧಿ ಎಂ.ಡಿ. ಇಲ್ಲದೇ ಇರುವುದೇ ಕಾರಣ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಆರೋಪಿಸಿದ್ದರು.
ಅವರ ಮನವಿ ಮೇರೆಗೆ ಇದೀಗ ಪೂರ್ಣಾವಧಿ ಎಂ.ಡಿ. ನೇಮಕ ಮಾಡಲಾಗಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಮ್ಮ ಮೆಟ್ರೋ ನೂತನ ಆಡಳಿತ ನಿರ್ದೇಶಕರಾಗಿ ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಿದೆ