ಹುಬ್ಬಳ್ಳಿ : ಶ್ರೀ ಸಿದ್ಧಾರೂಢರು ಹಾಗೂ ಸಮಕಾಲೀನ ಮಹಾತ್ಮರ ಅಂಬಾರಿ ಉತ್ಸವ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಆಯೋಜಿಸಿರುವ ಶ್ರೀ ಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ಸಂಗಮ ರಥಯಾತ್ರೆಯ ಮಂಗಳ ಕಾರ್ಯಕ್ರಮ ಹಾಗೂ ಆರು ಆನೆಗಳ ಅಂಬಾರಿ ಉತ್ಸವ ಡಿ.8ರಂದು ನಗರದಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಮಿಟಿ ಸಂಸ್ಥಾಪಕ ಅಧ್ಯಕ್ಷ ಮನೋಜಕುಮಾರ ಗದಗಿನ, ಅಂದು ಬೆಳಗ್ಗೆ 8ಗಂಟೆಗೆ ನೆಹರು ಮೈದಾನದಿಂದ ಹೊರಡುವ 6 ಆನೆಗಳ ಅಂಬಾರಿ ಉತ್ಸವವು ಸಂಜೆ 4ಗಂಟೆಗೆ ಶ್ರೀ ಸಿದ್ಧಾರೂಢ ಮಠದ ಆವರಣ ತಲುಪುವುದು. ಕೊಪ್ಪಿಕರ ರಸ್ತೆ, ತುಳಜಾಭವಾನಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕಾರವಾರ ರಸ್ತೆ ಮಾರ್ಗದಲ್ಲಿ ಅಂಬಾರಿ ಉತ್ಸವ ಸಂಚರಿಸಲಿದೆ ಎಂದರು.
ನೆಹರು ಮೈದಾನದಲ್ಲಿ ಏರ್ಪಡಿಸಿರುವ ಆನೆಗಳ ಅಂಬಾರಿ ಉತ್ಸವದ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರಸಿದ್ಧರಾಮ ಸ್ವಾಮೀಜಿ, ಮಣಕವಾಡದ ಶ್ರೀ ಅಭಿನವ ಮೃತ್ಯುಂಜುಸ್ವಾಮಿ, ವಿಜಯಪುರ ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿ, ಹನುಮನಹಳ್ಳಿ ಶಿವಾನಂದಮಠದ ಶ್ರೀ ಶಿವಬಸವಸ್ವಾಮಿ ವಹಿಸುವರು ಎಂದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಂಬಾರಿ ಉತ್ಸವಕ್ಕೆ ಚಾಲನೆ ನೀಡುವರು. ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಎನ್.ಎಚ್. ಕೋನರಡ್ಡಿ, ಎಂ.ಆರ್. ಪಾಟೀಲ, ಸಿ.ಸಿ. ಪಾಟೀಲ, ಸಂಸದ ಜಗದೀಶ ಶೆಟ್ಟರ್ ಅತಿಥಿಗಳಾಗಿದ್ದು, ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸಂಜೆ 4 ಗಂಟೆಗೆ ಶ್ರೀ ಸಿದ್ದಾರೂಢ ಮಠದ ಆವರಣದಲ್ಲಿ ನಡೆಯಲಿರುವ ಮಹಾತ್ಮರ ಸಂಗಮ ರಥಯಾತ್ರೆ ಮಂಗಳ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಣ್ಣಿಗೇರಿಯ ಶ್ರೀ ಶಿವಕುಮಾರ ಸ್ವಾಮಿ, ಹುಬ್ಬಳ್ಳಿಯ ಶ್ರೀ ಸದ್ಗುರು ರಾಮಾನಂದ ಭಾರತಿ ಸ್ವಾಮಿ, ನವಲಗುಂದಮಠದ ಶ್ರೀ ವೀರೇಂದ್ರ ಸ್ವಾಮಿ, ಚಿಕ್ಕೋಡಿಯ ಶ್ರೀ ಚಿದ್ಭನಾನಂದ ಭಾರತಿ ಸ್ವಾಮಿ ವಹಿಸುವರು ಎಂದರು.
ಸಚಿವರಾದ ಎಚ್.ಕೆ. ಪಾಟೀಲ, ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಬಾಳಕರ, ಮಹಾಪೌರ ರಾಮಪ್ಪ ಬಡಿಗೇರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕರಾದ ಅಮೃತ ದೇಸಾಯಿ, ಅಶೋಕ ಕಾಟವೆ ಅತಿಥಿಗಳಾಗಿದ್ದು, ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ನ.15ರಿಂದ ಶ್ರೀ ಸಿದ್ಧಾರೂಢ ಮಠದ ಆವರಣದಿಂದ ಪ್ರಾರಂಭಗೊಂಡಿದ್ದ ಶ್ರೀ ಸಿದ್ದಾರೂಢ ಸ್ವಾಮಿ, ಶ್ರೀ ಮಡಿವಾಳೇಶ್ವರ ಸ್ವಾಮಿ, ಶ್ರೀ ಅಜಾತ ನಾಗಲಿಂಗ ಸ್ವಾಮಿ, ಶ್ರೀ ಸಿದ್ದಪ್ಪಜ್ಜ ಸ್ವಾಮಿ, ಶ್ರೀ ಸಂತ ಶರೀಫ ಶಿವಯೋಗಿಗಳ ಹಾಗೂ ಶ್ರೀ ಗುರುನಾಥರೂಢ ಸ್ವಾಮಿ ಅವರ ಸಂಗಮ ರಥಯಾತ್ರೆಯು ಧಾರವಾಡ ಜಿಲ್ಲೆಯ 62 ಗ್ರಾಮಗಳಲ್ಲಿ ಸಂಚರಿಸಿದೆ. ಶುಕ್ರವಾರ ಮರಳಿ ಹುಬ್ಬಳ್ಳಿಗೆ ಆಗಮಿಸಿದೆ ಎಂದರು.