ಬೆಳಗಾವಿ : ಮಹಾರಾಷ್ಟ್ರದಲ್ಲಿ ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಪುಂಡಾಟ ಮೆರೆದಿದ್ದು, ಕರ್ನಾಟಕದ ಅಂಬಾರಿ ಬಸ್ ಗೆ ಮಸಿ ಬಳಿದಿದ್ದಾರೆ. ಇದೀಗ ಮಸಿ ಬೆಳೆದಿದ್ದ ಬಸ್ ಇದೀಗ ಬೆಳಗಾವಿ ಡಿಪೋಗೆ ಹಿಂತಿರುಗಿದೆ.
ಮಹಾರಾಷ್ಟ್ರ ಪುಣೆಯ ಸ್ವಾರಗೇಟ ಬಳಿ ಬೆಳಗಾವಿ ನಾಸಿಕ್ ಮಾರ್ಗದ ಅಂಬಾರಿ ಬಸ್ ನಿಲ್ಲಿಸಿದ್ದ ಶಿವಸೇನೆ ಮತ್ತು ಮನಸೆ ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದು, ಬಸ್ ಮೇಲೆ ಜೈ ಮಹಾರಾಷ್ಟ್ರ, ಮರಾಠಾ ಮಾನುಸ್ ಎಂದು ಮರಾಠಿ ಭಾಷೆಯಲ್ಲಿ ಬರಹ ಬರೆದು ಉದ್ಧಟತನ ಮೆರೆದಿದ್ದಾರೆ.
ಸದ್ಯ ಕರ್ನಾಟಕ ಗಡಿಯಲ್ಲಿ ಮಹಾರಾಷ್ಟ್ರ ಸಾರಿಗೆ ಅಧಿಕಾರಿಗಳು ಬಸ್ ಕಾರ್ಯಾಚರಣೆ ತಗ್ಗಿಸಿದ್ದು, ಕರ್ನಾಟಕದಿಂದ ಮಹಾರಾಷ್ಟ್ರದ ಗಡಿ ವರೆಗೂ ರಾಜ್ಯದ ಬಸಗಳ ಕಾರ್ಯಾಚರಣೆ ನಡೆಯುತ್ತಿದೆ. ಮಹಾರಾಷ್ಟ್ರಕ್ಕಿಂತಲೂ ಕರ್ನಾಟಕದಿಂದಲೇ ಅತಿ ಹೆಚ್ಚು ಬಸ್ ಕಾರ್ಯಾಚರಣೆ ನಡೆಸಿದ್ದು, ಸದ್ಯ ಕೊಲ್ಲಾಪುರ, ಪುಣೆ, ಮುಂಬೈ, ರತ್ನಾಗಿರಿ, ನಾಸಿಕ್ ರೂಟನ್ ನಲ್ಲಿ ಬಸ್ಗಳು ಸಂಚರಿಸುತ್ತಿವೆ. ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಹೋಗುವಂತೆ ಚಾಲಕರು ಮತ್ತು ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ.