ಬೆಂಗಳೂರು: ಮೆಟ್ರೋ ಬೆಂಗಳೂರು ಜನರ ಸಂಚಾರಿ ವ್ಯವಸ್ಥೆಯ ಜೀವನಾಡಿ.ಮೆಟ್ರೋ ಸ್ಟೇಷನ್ನಲ್ಲಿ ಟೈಟ್ ಸೆಕ್ಯೂರಿಟಿ ಇರುತ್ತೆ. ಇಂತಹ ಮೆಟ್ರೋ ನಿಲ್ದಾಣದಲ್ಲೇ ಪದೇ ಪದೇ ಸೂಸೈಟ್ ದುರಂತಗಳು ನಡೆಯುತ್ತಿವೆ.750 ಹೈವೋಲ್ಟೇಜ್ ಇದೆ ಅಂತ ಗೊತ್ತಿದ್ರೂ ಜನ ನಿರ್ಲಕ್ಷ್ಯ ತೋರ್ತಿದ್ದಾರೆ. ಇಷ್ಟೇಲ್ಲಾ ಅದ್ಮೇಲೆ ಕೊನೆಗೂ ಎಚ್ಚೆತ್ತ BMRCL ಹೊಸ ಪ್ಲಾನ್ ಒಂದನ್ನ ರೂಪಿಸಿದೆ. ಈ ಹಿಂದೆ ಮಾಡಿದ ದೊಡ್ಡ ತಪ್ಪು ಸರಿಪಡಿಸಿಕೊಳ್ಬೇಕಂತ ಅಂತ ನಿಲ್ದಾಣಗಳಲ್ಲಿ ಕೋಟಿ ಕೋಟಿ ಸುರಿದು ಸೇಫ್ಟಿ ಮಾಡಲು ಮುಂದಾಗಿದೆ
ಒಂದ್ಕಡೆ ಫುಲ್ ರಷ್…ಮೆಟ್ರೋ ಇಳಿಯೋಕೆ ಹತ್ತೋಕೆ ತಿಕ್ಕಾಟ ನೂಕಾಟ…ಜನ್ರನ್ನ ನಿಯಂತ್ರಿಸೋಕೆ ಹರಸಾಹಸ ಪಡ್ತಿರೋ ಸೆಕ್ಯುರಿಟಿ ಸಿಬ್ಬಂದಿ.. ಇದು ಮೆಟ್ರೋ ನಿರ್ಮಾಣ ವೇಳೆ ನಮ್ಮ ಮೆಟ್ರೋ ನಿಗಮ ಮಾಡಿದ ಕೊಂಚ ಎಡವಟ್ಟಿನ ಪರಿಣಾಮ..ಅಂದು ನಮ್ಮಲ್ಲಿಗೇನು ಸ್ಕ್ರೀನ್ ಡೋರ್ ಬೇಡ ಅಂತ ತೀರ್ಮಾನಿಸಿದ್ದ ಮೆಟ್ರೋ ಹಾಗೆ ಎಲ್ಲೋ ಲೈನ್ ಎಳೆದು ಸೆಕ್ಯುರಿಟಿ ನಿಲ್ಲಿಸಿ ಜನ್ರ ನಿಯಂತ್ರಣಕ್ಕೆ ಮುಂದಾಗಿತ್ತು. ಆದ್ರೆ ಈಗ ಆ ತಪ್ಪಿನ ಪರಿಣಾಮ ರಷ್ ಆದ ವೇಳೆ ಜನ್ರನ್ನ ನಿಯಂತ್ರಿಸೋಕೆ ಮೆಟ್ರೋಗೆ ಕಷ್ಟವಾಗ್ತಿದೆ.
ಹೌದು.. ..ಮೊಬೈಲ್ ಗಾಗಿ ಟ್ರ್ಯಾಕ್ ಗೆ ಜಿಗಿತ ಮಹಿಳೆ, ಆತ್ಮಹತ್ಯೆಗೆ ಯತ್ನಿಸಿದ ಕೇರಳ ಯುವಕ, ಟ್ರ್ಯಾಕ್ ನಲ್ಲಿ ಕಪ್ಪು ಬಣ್ಣದ ಬೆಕ್ಕು ಪ್ರತ್ಯಕ್ಷ. ಈ ಸಾಲು ಸಾಲು ಘಟನೆಗಳು ನಡೆದಿದ್ದು ಬೇರೆಲ್ಲೂ ಅಲ್ಲ, ನಮ್ಮ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲೇ.. ಈ ಪ್ರಕರಣಗಳಿಂದ ನಮ್ಮ ಮೆಟ್ರೋ ಎಷ್ಟು ಸೇಫ್.. ಅನ್ನೋ ಪ್ರಶ್ನೆ ಶುರುವಾಗಿತ್ತು.. ಮೆಟ್ರೋ ಹಳಿಗಳಲ್ಲಿ ಹೈವೋಲ್ಟೇಜ್ ಕರೆಂಟ್ ಇರುತ್ತೆ.. ಇದ್ರಿಂದ ಅನಾಹುತ ಆದ್ರೆ ಹೊಣೆ ಯಾರು ಅನ್ನೋದು ಜನ್ರ ಪ್ರಶ್ನೆಯಾಗಿತ್ತು. ಈಗ ಇದಕ್ಕೊಂದು ಪರಿಹಾರಕ್ಕೆ ಮೆಟ್ರೋ ನಿಗಮ ಮುಂದಾಗಿದೆ. ಈ ರೀತಿಯ ಅನಾಹುತ ತಪ್ಪಿಸಲು ಎಲ್ಲಾ ಮೆಟ್ರೋ ಸ್ಟೇಷನ್ಗಳಿಗೂ PSD ಅಳವಡಿಸಲು ಪ್ಲಾನ್ ಮಾಡಿದೆ. ಪಿಎಸ್ಡಿ ಅಂದ್ರೆ ಫ್ಲಾಟ್ ಫಾರಂ ಸ್ಕ್ರೀನ್ ಡೋರ್.. ಇದನ್ನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಕೆಗೆ ಬಿಎಂಆರ್ಸಿಎಲ್ ಪ್ಲ್ಯಾನ್ ಮಾಡ್ಕೊಂಡಿದೆ.. ಈ ಪಿಎಸ್ಡಿ ಅಳವಡಿಸೋದ್ರಿಂದ ಯಾರಾದ್ರೂ ಟ್ರ್ಯಾಕ್ಗೆ ಹಾರೋದನ್ನ, ಬೀಳೋದನ್ನ, ಮುಗ್ಗರಿಸೋದನ್ನ ತಪ್ಪಿಸಬಹುದು. ಮೆಟ್ರೋ ಎಂಟರ್ ಆಗೋವಾಗ್ಲೂ, ಹೊರ ಬರೋವಾಗ್ಲೂ ಮೆಟ್ರೋ ಡೋರ್ ಓಪನ್ ಮತ್ತು ಈ ಪಿಎಸ್ಡಿ ಡೋರ್ ಏಕಕಾಲಕ್ಕೆ ಓಪನ್ ಆಗೋದ್ರಿಂದ ಅವಘಡ ನಡೆಯೋ ಸಾಧ್ಯತೆ ಇಲ್ಲ. ಅಲ್ಲದೆ ಎಸಿಯಿಂದ ಆಗುವ 30 ಪರ್ಸೆಂಟ್ ವೆಚ್ಚ ಇದ್ರಿಂದ ಉಳಿತಾಯವಾಗಲಿದ್ಯಂತೆ. ಜೊತೆಗೆ ಹಳಿ ಸಮೀಪದಲ್ಲಿ ನಿಂತು ಫೋಟೊ, ರೀಲ್ಸ್ ಮಾಡೋರಿಗೂ ಬ್ರೇಕ್ ಬೀಳುತ್ತೆ.
ಬೇರೆ ಬೇರೆ ದೇಶಗಳ ಕೆಲ ಮೆಟ್ರೊ ನಿಲ್ದಾಣಗಳಲ್ಲಿ ಜನರು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಕಾಲುಜಾರಿ ಬೀಳುವ ಘಟನೆಗಳು ಸಂಭವಿಸಿವೆ.ಅದೇ ರೀತಿ ನಮ್ಮ ಮೆಟ್ರೋದಲ್ಲೂ 2012 ರಲ್ಲಿ ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಓರ್ವ ಬಾಲಕ ಹಳಿಗೆ ಹಾರಿದ್ದ. ಜೊತೆಗೆ 2019 ರಲ್ಲಿ ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣದಲ್ಲಿ ಓರ್ವ ಯುವಕ ಹಳಿಗೆ ಹಾರಿ ಸೂಸೈಡ್ ಗೆ ಯತ್ನಿಸಿದ್ದ. ಇದೀಗ ಕೆಲ ದಿನಗಳ ಹಿಂದೆ ಜಾಲಹಳ್ಳಿ ನಿಲ್ದಾಣದಲ್ಲಿ ಸೂಸೈಟ್ ಗೆ ಯತ್ನ ನಡೆದಿದೆ. ಈ ರೀತಿ ಘಟನೆ ಮತ್ತೆ ನಡೆಯದಂತೆ ಎಚ್ಚರ ವಹಿಸಲು ಪ್ರತಿ ಸ್ಟೇಶನ್ ಒಳಗೆ ಬಾಗಿಲು ಅಳವಡಿಸಬೇಕಿದೆ. ಸದ್ಯ ಅಂಡರ್ ಗ್ರೌಂಡ್ ನಿಲ್ದಾಣದಲ್ಲಿ ಎರಡು ಟ್ರ್ಯಾಕ್ ಗಳ ನಡುವೆ ಅಂತರ ಕಡಿಮೆ ಇದೆ. ಕೆಲ ನಿಲ್ದಾಣಗಳಲ್ಲಿ ಪೀಕ್ ಅವರ್ಸ್ ನಲ್ಲಿ ಅತಿಹೆಚ್ಚು ಜನದಟ್ಟಣೆ ಉಂಟಾಗ್ತಿದೆ. ಹೀಗಾಗಿ ಸ್ಕ್ರೀನ್ ಡೋರ್ ಅಳಡಿಸಿ ಪ್ರಯಾಣಿಕರ ಹಿತ ಕಾಪಾಡಲು ತೀರ್ಮಾನಿಸಿದೆ.
ಮೆಟ್ರೊದ ಪ್ರತಿ ಬಾಗಿಲಿಗೆ ತಕ್ಕಂತೆ ಪ್ಲಾಟ್ಫಾರಂನಲ್ಲಿ ಹಳದಿ ಗೆರೆ ಎಳೆಯಲಾಗಿದೆ. ಒಂದೊಂದು ಗೆರೆಯ ಮುಂದೆ ಒಂದೊಂದು ಬಾಗಿಲು ಬರುವಂತೆ ಮೆಟ್ರೊ ರೈಲನ್ನು ನಿಲ್ಲಿಸಲಾಗುತ್ತದೆ. ರೈಲು ಬರುವ ಮುನ್ನ ಪ್ರಯಾಣಿಕರು ಈ ಹಳದಿ ಗೆರೆಯ ಮೇಲೆ ನಿಲ್ಲುತ್ತಾರೆ. ಮುಂದೆ ಹೋದರೆ ಸಿಬ್ಬಂದಿ ಕೂಗಿ ಎಚ್ಚರಿಕೆ ನೀಡುತ್ತಾರೆ. ಈ ಹಳದಿ ಪಟ್ಟಿಯ ಮೇಲೆಯೇ ಗಾಜಿನ ಪರದೆ ಅಳವಡಿಸಲಾಗುತ್ತದೆ. ಮೆಟ್ರೊ ಬಾಗಿಲು ಬರುವ ಜಾಗದಲ್ಲಿ ಸ್ವಯಂಚಾಲಿತವಾಗಿ ತೆರೆಯುವ ಬಾಗಿಲು ಇರುತ್ತದೆ. ಇದರಿಂದಾಗಿ ಪ್ರಯಾಣಿಕರು ಗಾಜಿನ ಪರದೆಯ ಹಿಂದೆಯೇ ನಿಂತು ರೈಲಿಗಾಗಿ ಕಾಯಬೇಕಾಗುತ್ತದೆ. ಆಗ ಪ್ಲಾಟ್ಫಾರಂನಿಂದ ಮುಂದೆ ಹೋಗುವ ಪ್ರಸಂಗವೇ ಬರುವುದಿಲ್ಲ. ಒಟ್ನಲ್ಲಿ ನಮ್ಮ ಮೆಟ್ರೋದಲ್ಲಿ ಆಗಾಗ ಆಗ್ತಿದ್ದ ಇಂತಹ ಸಮಸ್ಯೆಗಳಿಂದ ಪೀಕ್ ಅವರ್ನಲ್ಲಿ ಮೆಟ್ರೋ ಸಂಚಾರಕ್ಕೆ ಸಮಸ್ಯೆ ಆಗ್ತಿತ್ತು.. ಸಮಯಕ್ಕೆ ಸರಿಯಾಗಿ ಹೋಗೋಕ್ ಆಗ್ದೆ ಪ್ರಯಾಣಿಕರು ಹಿಡಿಶಾಪ ಹಾಕ್ತಿದ್ರು.. ಆದಷ್ಟು ಬೇಗ ಈ ಪಿಎಸ್ಡಿ ಅಳವಡಿಕೆಯಾದ್ರೆ ಬಹುತೇಕ ಇದಕ್ಕೆಲ್ಲಾ ಬ್ರೇಕ್ ಬೀಳೋ ಸಾಧ್ಯತೆ ಇದೆ.