ದಕ್ಷಿಣದ ಚಿತ್ರಗಳಲ್ಲಿ ಮಿಂಚುತ್ತಿರುವ ತಾರೆ ಕೀರ್ತಿ ಸುರೇಶ್. ‘ಮಹಾನಟಿ’ ಸಿನಿಮಾ ಮೂಲಕ ರಾಷ್ಟ್ರ ಪಶಸ್ತಿ ಮುಡಿಗೇರಿಸಿಕೊಂಡ ಕೀರ್ತಿ ಸದ್ಯಕ್ಕೆ ಹೀರೋಯಿನ್ ಓರಿಯಂಟೆಡ್ ಸಿನಿಮಾಗಳ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಖ್ಯಾತ ನಿರ್ಮಾಪಕ ಮತ್ತು ನಟ ಸುರೇಶ್ – ನಟಿ ಮೇನಕಾ ದಂಪತಿಗಳ ಕಿರಿಯ ಮಗಳು ಕೀರ್ತಿ ಸುರೇಶ್. ಮಲಯಾಳಂ ಚಿತ್ರರಂಗದಲ್ಲಿ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ಅವರು ಕಡಿಮೆ ಅವಧಿಯಲ್ಲಿಯೇ ಸ್ಟಾರ್ ನಟಿಯಾದರು.
ಇನ್ನೂ ಕೀರ್ತಿ ಸುರೇಶ್ ಮದುವೆಯ ಬಗ್ಗೆ ವದಂತಿಗಳು ಆಗಾಗ್ಗೆ ಹರಿದಾಡುತ್ತಿವೆ. 2 ವರ್ಷಗಳ ಹಿಂದೆ ಕೀರ್ತಿ ಸುರೇಶ್ ಕೇರಳ ಮೂಲದ ರಾಜಕಾರಣಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದೀಗ ಕೀರ್ತಿ ಸುರೇಶ್ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟಿಯ ಮದುವೆ ಮ್ಯಾಟರ್ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ರೈತರೇ ಗಮನಿಸಿ.. ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!
ಮೂಲಗಳ ಪ್ರಕಾರ, ಕುಟುಂಬಸ್ಥರು ನೋಡಿದ ಹುಡುಗನ ಜೊತೆ ಕೀರ್ತಿ ಮದುವೆಯಾಗಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಇದೇ ಡಿಸೆಂಬರ್ನಲ್ಲಿ ಗೋವಾದಲ್ಲಿ ಕೀರ್ತಿ ಸುರೇಶ್ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ವರ ಕೂಡ ನಟಿಯ ಸಂಬಂಧಿ ಎಂದು ಹೇಳಲಾಗುತ್ತಿದೆ. ಇದು ವಿಚಾರ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಕಾದುನೋಡಬೇಕಿದೆ.
ಕೀರ್ತಿ ಸುರೇಶ್ ಅವರ ಹೆಸರು ಅನೇಕರೊಂದಿಗೆ ತಳುಕು ಹಾಕಿಕೊಂಡಿದೆ. ಈ ಹಿಂದೆ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಜೊತೆ ಕೂಡ ತಳುಕು ಹಾಕಿಕೊಂಡಿತ್ತು. ಆ ನಂತರ ನಟಿ ಇದು ಸುಳ್ಳು ಸುದ್ದಿ. ನಾವಿಬ್ಬರೂ ಫ್ರೆಂಡ್ಸ್ ಎಂದು ಪ್ರತಿಕ್ರಿಯೆ ನೀಡಿದರು. ಹಾಗಾಗಿ ಈ ಬಾರಿ ಹರಿದಾಡುತ್ತಿರುವ ಮದುವೆ ವಿಚಾರಕ್ಕೆ ನಟಿ ಏನು ಹೇಳ್ತಾರೋ? ಕಾಯಬೇಕಿದೆ. ಇನ್ನೂ `ಬೇಬಿ ಜಾನ್’ ಸಿನಿಮಾ ಮೂಲಕ ನಟಿ ಕೀರ್ತಿ ಸುರೇಶ್ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ.