ಹುಬ್ಬಳ್ಳಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣ ಹಿನ್ನೆಲೆ ಕರ್ನಾಟಕ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತಿದ್ದು, ಭಕ್ತರು ಭಯ ಪಡುವ ಅಗತ್ಯ ಇಲ್ಲ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಮನವಿ ಮಾಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ, ಪ್ರಯಾಗ್ ರಾಜ್ ತೆರಳಿದ ಭಕ್ತರು ಯಾವುದೇ ರೀತಿಯ ಆತಂಕ ಬೇಡ. ಗಾಯಾಳು ಬಗ್ಗೆ ಸರ್ಕಾರ ಗಮನ ಹರಿಸಿದೆ. ಪ್ರಯಾಗ್ ರಾಜ್ ನಲ್ಲಿ ಘಟನೆ ನಡೆಯಬಾರದಿತ್ತ. ಇದೊಂದು ಘಟನೆ ಬೇಸರ ತರಿಸಿದೆ.ಕರ್ನಾಟಕದ ಭಕ್ತರು ಸುರಕ್ಷಿತವಾಗಿ ಬರಲು ವ್ಯವಸ್ಥೆ ಮಾಡಲಾಗುವುದು. ಘಟನೆ ಕುರಿತು ಸ್ವತಃ ಸಿಎಂ ಯೋಗಿ ಆದಿತ್ಯ ಅವರು ಮಾಹಿತಿ ಕೊಟ್ಟಿದ್ದಾರೆ. ಈ ಕುರಿತು ಪಿಎಂ ಮೋದಿ, ಗೃಹ ಸಚಿವ ಅಮಿತಾ ಶಾ ಸಹ ಮಾಹಿತಿ ಪಡೆದಿದ್ದಾರೆ. ಯಾವುದೇ ರೀತಿಯ ಆತಂಕ ಬೇಡಾ ಎಂದ್ರು.
ಇನ್ನೂ, ಗಂಗಾ ನದಿಯಲ್ಲಿ ಮೋದಿ, ಶಾ ಸ್ನಾನ ಮಾಡಿದರೂ ಪಾಪ ತೊಳೆಯಲ್ಲ ಹಾಗೂ ಬಡತನ ನಿವಾರಣೆ ಆಗಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಅತ್ಯಂತ ಬಾಲಿಶತನಿಂದ ಕೂಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು ಮಹಾಕುಂಭಮೇಳಕ್ಕೆ ನಾಡಿನ ಎಲ್ಲ ಕಡೆಯಿಂದ ಜನರು ಹೋಗಿದ್ದಾರೆ. ಇದೊಂದು ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಆಗಿದೆ. ಇದೊಂದು ಶ್ರದ್ಧಾ ಭಕ್ತಿಗಳಿಂದ ಹೋಗತಾ ಇದ್ದಾರೆ. ತಾವು ಮುಸ್ಲಿಮರಿಗೆ ಹಣ ಕೊಟ್ಟು ಮೆಕ್ಕಾ ಕಳುಹಿಸುತ್ತಿರಿ. ಸೋನಿಯಾ ರೋಮ್ ದೇಶಕ್ಕೆ ಹೋಗುತ್ತಾರೆ. ಅವರಿಗೆ ಕೇಳತಾ ಇಲ್ಲಾ ಯಾಕೆ..? ಎಂದು ಪ್ರಶ್ನಿಸಿದರು.