ನವದೆಹಲಿ:- ಮಹಾಕುಂಭವು ಆಧ್ಯಾತ್ಮಿಕ ಪರಂಪರೆ ಪ್ರತಿನಿಧಿಸುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
X ಮಾಡಿರುವ ಅವರು, ಮಹಾಕುಂಭವು ಭಾರತದ ಶಾಶ್ವತ ಆಧ್ಯಾತ್ಮಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯದ ಆಚರಣೆ’’ ಎಂದು ಹೇಳಿದ್ದಾರೆ.
ಎಲ್ಲಾ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಶುಭ ಹಾರೈಸಿದ್ದಾರೆ. ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವ ಕೋಟಿಗಟ್ಟಲೆ ಜನರಿಗೆ ಬಹಳ ವಿಶೇಷವಾದ ದಿನ. ಮಹಾ ಕುಂಭ 2025 ಪ್ರಯಾಗರಾಜ್ನಲ್ಲಿ ಪ್ರಾರಂಭವಾಗಿದೆ, ಅಸಂಖ್ಯಾತ ಜನರನ್ನು ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿಯ ಪವಿತ್ರ ಸಂಗಮದಲ್ಲಿ ಒಟ್ಟುಗೂಡಿಸುತ್ತದೆ. ಕುಂಭವು ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಸಾಕಾರಗೊಳಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯದ ಆಚರಣೆ ಇದಾಗಿದೆ ಎಂದು ಬರೆದಿದ್ದಾರೆ.
ವಿವಿಧತೆಯಲ್ಲಿ ಏಕತೆಯನ್ನು ಅನುಭವಿಸಲು, ನಂಬಿಕೆ ಮತ್ತು ಆಧುನಿಕತೆಯ ಸಂಗಮದಲ್ಲಿ ಧ್ಯಾನ ಮಾಡಲು ಮತ್ತು ಪವಿತ್ರ ಸ್ನಾನ ಮಾಡಲು ಬಂದವರು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.2025 ರ ಮಹಾಕುಂಭದಲ್ಲಿ ಭಾಗವಹಿಸುವ ಮೂಲಕ ಸನಾತನ ಸಂಸ್ಕೃತಿಯ ಈ ವೈಭವಯುತ ಸಂಪ್ರದಾಯದ ಭಾಗವಾಗೋಣ ಎಂದಿದ್ದಾರೆ.