ಬೆಂಗಳೂರು: ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಾಘ ಪೂರ್ಣಮಿಯ ವಿಶೇಷವಾದ ದಿನದಂದು ವೃಕ್ಷಮಾತೆ ಪದ್ಮಶ್ರೀ ಪರಿಸರ ರಾಯಭಾರಿಗಳಾದಂತ ಸಾಲುಮರದ ತಿಮ್ಮಕ್ಕನ ಮಗನಾದ ಉಮೇಶ್ ಸಂಗಮದಲ್ಲಿ ವಿಶೇಷ ತೀರ್ಥ ಸ್ನಾನ ಮಾಡಿದರು.
ಈ ಸಂದರ್ಭದಲ್ಲಿ ವೃಕ್ಷಮತೆ ಸಾಲುಮರದ ತಿಮ್ಮಕ್ಕ ರವರ ಕಷ್ಟ ಸುಖಗಳಲ್ಲಿ ಬೆನ್ನೆಲುಬಾಗಿ ಹಾಗೂ ಮನೆಯ ಹಿರಿಯ ಮಗನಂತಿರುವ ಸರಳ ಸಜ್ಜನ ಬಡವರ ಬಂಧು ಡಾಕ್ಟರ್ ಜಿ ಪರಮೇಶ್ವರ್ ರವರಿಗೆ ಮತ್ತು ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಅವರ ಪರವಾಗಿ ಸಾಲು ಮರದ ತಿಮ್ಮಕ್ಕ ರವರ ದತ್ತು ಪುತ್ರ ಉಮೇಶ್ ರವರು ಪುಣ್ಯ ಸ್ನಾನ ಮಾಡಿ ಒಳ್ಳೆಯದಾಗಲಿ ಮತ್ತು ಅವರ ಕನಸುಗಳೆಲ್ಲ ನನಸಾಗಲಿ ಎಂದು ಬೇಡಿಕೊಂಡಿದ್ದಾರೆ
ಪರಮೇಶ್ವರ ಅವರು ಸಾಲುಮರದ ತಿಮ್ಮಕ್ಕನ ಮೇಲೆ ಇಟ್ಟಿರುವ ನಂಬಿಕೆ, ಅವರ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸಹಾಯ ಮಾಡುತ್ತಾ ಬರುತ್ತಿರುವುದರಿಂದ ನಾನು ಕೂಡ ಚಿರಋಣಿಯಾಗಿದ್ದು ಅವರ ಕುಟುಂಬದವರು ಎತ್ತರಕ್ಕೆ ಬೆಳೆಯಲಿ ಎಂದರು.
ನಿಮಗೆ ಗೊತ್ತೆ..? ಸಕ್ಕರೆ ಕಾಯಿಲೆಯಿಂದ ಹೊರಬರಲು ಬೆಂಡೆಕಾಯಿ ಪಕ್ಕಾ ಹೆಲ್ಪ್ ಮಾಡುತ್ತೆ..!
ತೀರ್ಥ ಸ್ನಾನ ಆದ ನಂತರ ಕೆಲವು ಅಖಾಡಗಳಿಗೆ ಭೇಟಿ ನೀಡಿ ವಿಶೇಷವಾಗಿ ಸಾಧುಸಂತರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದು ವಿಶೇಷವಾಗಿ ಪರಮೇಶ್ವರ ಭಾವಚಿತ್ರಗಳನ್ನು ಸಾಧುಸಂತರಿಗೆ ನೀಡಿ ಒಳ್ಳೆದಾಗಲಿ ಆಶೀರ್ವಾದ ಮಾಡಿಸಲಾಯಿತು.
ಅದರಲ್ಲೂ ವಿಶೇಷವಾಗಿ ಪ್ರಖ್ಯಾತಿ ಪಡೆದಿರುವ ರುದ್ರಾಕ್ಷಿ ಬಾಬಾ ಪರಮೇಶ್ವರ ಭಾವಚಿತ್ರಕ್ಕೆ ವಿಶೇಷವಾದ ಆಶೀರ್ವಾದ ಮಾಡಿದರು, ಈ ಸಂದರ್ಭದಲ್ಲಿ ಜೊತೆಯಲ್ಲಿ ಚೀರನಹಳ್ಳಿಯಾ ಪ್ರವೀಣ್, ಆಲೂರಿನ ಸಚಿನ್, ತರೀಕೆರೆಯ ಚೇತನ್ ಟಿ , ಸೇರಿದಂತೆ ಎಲ್ಲರೂ ಜೊತೆಯಾಗಿ ಭಾಗಿಯಾಗಿದ್ದರು