ಮಹದೇವಪುರ:- ದೇಶಿಯ ಕ್ರೀಡೆಯಾದ ಖೋ ಖೋ ಆಟವನ್ನ ಮದರ್ ಆಫ್ ಆಲ್ ಗೇಮ್ಸ್ ಎನ್ನುತ್ತಾರೆ. ಖೋ ಖೋ ಕ್ರೀಡೆಯನ್ನ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್ ತಿಳಿಸಿದರು.
ಕ್ಷೇತ್ರದ ವರ್ತೂರು ವಾರ್ಡ್ ನ ಗುಂಜೂರು ಗ್ರಾಮದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅತಿ ಕಿರಿಯ ಬಾಲಕ ಬಾಲಕಿಯರ ಹೊನಲು ಬೆಳಕಿನ ಅಂತರಾಷ್ಟ್ರೀಯ ಖೋ ಖೋ ಸ್ಪರ್ಧೆ 2023ರ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ದೇಶಿಯ ಕ್ರೀಡೆಯಾದ ಖೋ ಖೋ ಅಟವನ್ನು ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಎಂದು ಹೇಳಿದರು.
ರಾಜ್ಯದ ಎಲ್ಲಾ ಭಾಗಗಳಿಂದ 120ಕ್ಕು ಹೆಚ್ಚು ತಂಡಗಳು 1200 ಕ್ಕು ಹೆಚ್ಚು ಮಕ್ಕಳು ಖೋ ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಅತಿ ಕಿರಿಯ ಬಾಲಕ,ಬಾಲಕಿಯರ ಆಟವನ್ನು ನೋಡಲು ಚಂದ ಮತ್ತು ಕಿರಿಯ ವಯಸ್ಸಿನಲ್ಲಿ ಏನು ಸಾಧನೆ ಮಾಡುತ್ತಾರೋ ಅದು ಅವರ ಜೀವನದಲ್ಲಿ ಮುಂದುವರೆಯುತ್ತದೆ ಅದ್ದರಿಂದ ಹೆಚ್ಚಿನ ಅವಕಾಶಗಳನ್ನು ನೀಡಲು ಖೋಖೋ ಪಂದ್ಯಗಳನ್ನು ಅಯೋಜಿಸಲಾಗುವುದು ಎಂದರು.
ಖೋ ಖೋ ಸೊಮಾರಿತನ ಆಟವಲ್ಲ
ತುಂಬಾ ಚುರುಕಿನ ಆಟ ಮತ್ತು ಇದ್ದನ್ನ ಮದರ್ ಆಫ್ ಆಲ್ ಗೇಮ್ಸ್ ಎಂದು ಕರೆಯುತ್ತಾರೆ, ಈ ಆಟವನ್ನ ಆಡುವವರು ಯಾವ ಆಟ ಬೇಕಾದರೂ ಆಡುತ್ತಾರೆ. ಈ ಆಟವನ್ನ ನೋಡಿದಷ್ಟು ಕಲಿಯಬಹುದು ಎಂದು ತಿಳಿಸಿದರು.ಕೆಲವರ್ಷಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ಖೋಖೋ ಸ್ಪರ್ಧೆಯನ್ನ ಹೆಚ್ಚು ಹೆಚ್ಚಾಗಿ ಆಯೋಜನೆ ಮಾಡಿ ಕ್ರೀಡೆಯನ್ನ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಆಡಲು ಈ ಮಕ್ಕಳಲ್ಲಿ 50 ರಿಂದ 60 ಮಕ್ಕಳನ್ನು ಆಯ್ಕೆ ಮಾಡಿ ಸರ್ಕಾರ ನೀಡುವ ಸವಲತ್ತು ಮತ್ತು ಪ್ರೋತ್ಸಾಹ ಧನ ಸಿಗುವಂತೆ ಮಾಡಲಾಗುವುದು, ಮತ್ತು ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾ ಪಟುಗಳನ್ನಾಗಿ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ನಮ್ಮ ಖೋ ಖೋ ಸಂಸ್ಥೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ಖೋ ಖೋ ಆಟ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದು ಖೋ-ಖೋ ಆಟ ಹೆಚ್ಚು ಪ್ರಸಿದ್ಧಿ ಹೊಂದಿದೆ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕ್ರೀಡಾ ಪಟುಗಳು ಆಡುತ್ತಿದ್ದಾರೆ ಎಂದು ತಿಳಿಸಿದರು.
ಭಾರತೀಯ ಕ್ರೀಡೆಗಳಾದ ಕುಸ್ತಿ, ಕಬ್ಬಡ್ಡಿ, ಖೋ ಖೋ ಆಟಗಳಿಗೆ ಸರ್ಕಾರ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್ ನಾಗೇಶ್ ಗೌರವ ಕಾರ್ಯದರ್ಶಿ ಆರ್.ಮಲ್ಲಿಕಾರ್ಜುನಯ್ಯ, ಕಿಸಾನ್ ಕಾಂಗ್ರೆಸ್ ಸದಸ್ಯ ಜಿಟಿ ನಾಗೇಶ್ ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಮಾಜಿ ಗ್ರಾ.ಪ ಅದ್ಯಕ್ಷ ಜಿ ಎಮ್ ಬಸವರಾಜ್ ,ರಾಮಕೃಷ್ಣಪ್ಪ ಗುಂಜೂರು, ಸಮಾಜ ಸೇವಕರಾದ ವಾಸು, ಆನಂದ್,
ಜಿ ಬಿ ಮುನಿರಾಜ್,ಶ್ರೀನಿವಾಸ ರೆಡ್ಡಿ,ಚಂದ್ರಪ್ಪ,ರಾಜ ಗೋಪಾಲ್ ರೆಡ್ಡಿ, ಮುನಿರಾಜು ,ಶಿವಯೋಗಿ ಎಸ್ಎಸ್ ಎಲಿಯನ್,ರವಿ ಕುಮಾರ್, ನಾಗರಾಜ್, ಕ್ರೀಡಾಪಟುಗಳು ಮತ್ತಿತರರು ಇದ್ದರು