ಮಹದೇವಪುರ: ಹಿಂದೂ ಧರ್ಮದಲ್ಲಿ ಒಂದೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ , ವೈಭವವಿದ್ದು ಭಕ್ತರ ನಂಬಿಕೆಗಳಿಗೂ ಮಿಗಿಲಾದ ವಿಸ್ಮಯಗಳಿವೆ. ವರ್ಷಕ್ಕೆ ಒಮ್ಮೆ ಬರುವ ವೈಕುಂಠ ಏಕಾದಶಿಯೆಂದು ವೈಕುಂಠ ದ್ವಾರ ದಾಟಬೇಕೆಂಬ ಭಕ್ತರ ನಂಬಿಕೆಗೆ ಇಂದು ಬೆಂಗಳೂರು ಸಜ್ಜಾಗಿತ್ತು .
ಹಾಗೇ ಬೆಂಗಳೂರು ಪೂರ್ವ ತಾಲ್ಲೂಕಿನಲ್ಲೂ ಈ ವೈಭವ ಯಾವುದೇ ಕಮ್ಮಿ ಇಲ್ಲವಂತೆ ನಡೆದಿದ್ದು. ಕುಂದಲಹಳ್ಳಿ ಸಮೀಪದ ಬಿಇಎಂಎಲ್ ಲೇಔಟ್ ನಲ್ಲಿರುವ ಶ್ರೀ ಭೂನೀಳಾ ಸಮೇತ ವೆಂಕಟರಮಣ ದೇಗುಲ ಸೇರಿ ಕೆಆರ್ ಪುರದ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ವೆಂಕಟರಮಣ ಸ್ವಾಮಿ ದೇವಾಲಯದಲ್ಲೂ ವೈಭವದ ವೈಕುಂಠ ಏಕಾದಶಿಯನ್ನು ಆಚರಣೆ ಮಾಡಲಾಗಿದ್ದು .
ದೇವಾಲಯಗಳು ವರ್ಣ ರಂಜಿತವಾಗಿ ಸಿಂಗಾರಗೊಂಡಿದ್ದು .ದೂರ ದೂರದವರೆಗೂ ಭಕ್ತಸಾಗರೇ ಕಾಣಸಿಗುತ್ತಿತ್ತು. ಇನ್ನೂ ವೈಕುಂಠಾಧಿಪತಿಯ ದರ್ಶನ ಮಾಡಿ ಗೋವಿಂದಾ ಗೋವಿಂದ ಎಂಬ ನಾಮ ಸ್ಮರಣೆಯಲ್ಲೇ ವೈಕುಂಠ ದ್ವಾರವನ್ನು ದಾಟುತ್ತ ತಮ್ಮ ಇಷ್ಟಾರ್ಥಗಳನ್ನು ಈಡೇರಿಸು ದೇವಾ ಎಂದು ಭಕ್ತಿ ಭಾವದಿಂದ ಬೇಡಿತ್ತಾ ಹೊರ ಬರುತ್ತಿದ್ದರು ಭಕ್ತಾದಿಗಳು . ದ್ವಾದಶಿ ದಿನದಂದು ಬೆಳಗ್ಗೆ ವೆಂಕಟೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ, ಅರ್ಚನೆ, ಮಹಾಮಂಗಳಾರತಿಯನ್ನ ಮಾಡಲಾಯಿತು.ಎಲ್ಲಾ ಭಕ್ತಾದಿಗಳಿಗೂ ಅನ್ನ ಸಂತರ್ಪಣೆ ಜೊತೆಗೆ ವಿಶೇಷ ಲಡ್ಡುಗಳನ್ನು ವಿತರಣೆ ಮಾಡಲಾಯಿತು.