ಚಿತ್ರದುರ್ಗ: ಪಿಎಸ್ ಐ ಮೇಲೆ ಬಿಜೆಪಿ ಮುಖಂಡ ಹಲ್ಲೆ ಮಾಡಿದರು ಎಂಬ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಚಿತ್ರದುರ್ಗ ನಗರ ಠಾಣೆ ಪಿಎಸ್ಐ ಗಾದ್ರಿಲಿಂಗಪ್ಪ ಅವರೇ ಮೊದಲು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕಪಾಳಮೋಕ್ಷ ಮಾಡಿದ್ದು, ಆ ಬಳಿಕ ಇಬ್ಬರ ನಡುವೆ ಮಾರಾಮಾರಿ ನಡೆದಿದೆ.
ಚಿತ್ರದುರ್ಗ ನಗರದಲ್ಲಿರುವಂತಹ ಐಶ್ವರ್ಯ ಪೋರ್ಟ್ ಬಳಿ ರಾತ್ರಿ 12:30ರ ವೇಳೆ ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತ್ ಗೌಡ ಹಾಗೂ ಚಿತ್ರದುರ್ಗ ಪಿಎಸ್ಐ ಗಾದ್ರಿ ಲಿಂಗಪ್ಪನವರ ನಡುವೆ ಮಾರಮಾರಿ ಗಲಾಟೆ ನಡೆದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಮಧುಗಿರಿಯ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತ್ ಗೌಡ ಅವರು ರಾತ್ರಿ ಐಶ್ವರ್ಯ ಪೋರ್ಟ್ ನಲ್ಲಿ ಊಟ ಮಾಡಲು ಬಂದಾಗ ಈ ಒಂದು ಘಟನೆ ನಡೆದಿದ್ದು ಇಬ್ಬರ ನಡುವೆ ಮಾತಿನ ಮಾತು ಬೆಳೆದು ಕೈ ಕೈ ಮಿಲಾಸಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ ಇನ್ನು ಈ ವಿಚಾರವನ್ನು ತಿಳಿದ ಬಿಜೆಪಿ ಮಾಜಿ ಶಾಸಕ ಜಿಎಸ್ ತಿಪ್ಪಾರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಬಿಜೆಪಿ ಮಾಜಿ ಶಾಸಕ ತಿಪ್ಪಾರೆಡ್ಡಿ ಮಾಧ್ಯಮದವರೊಂದಿಗೆ ಮಾತನಾಡಿ ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಅವರು ಬಿಜೆಪಿ ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಇದರ ನಡುವೆ ಚಿತ್ರದುರ್ಗದಲ್ಲಿ ಕೆಲಸದ ನಿಮಿತ್ತ ಬಂದಿದ್ದು ರಾತ್ರಿ ಐಶ್ವರ್ಯ ಪೋರ್ಟ್ ನಲ್ಲಿ ಊಟ ಮುಗಿಸಿ ಹೊರಗಡೆ ಬಂದು ನಿಂತಾಗ ಅಲ್ಲಿಗೆ ಬಂದ ಪಿಎಸ್ಐ ಗಾದಿಲಿಂಗಪ್ಪನವರ ಹನುಮಂತೇಗೌಡ ಅವರನ್ನ ಏಕವಚನದಲ್ಲಿ ಮಾತನಾಡಿಸಿ ಅಮಾನುಷವಾಗಿ ನಡೆದುಕೊಂಡಿದ್ದಾರೆ ಮಾತಿಗೆ ಮತ ಬೆಳೆದು ಕೈ ಕೈ ವಿಲಾಸಿದ್ದಾರೆ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮವನ್ನು ಜರುಗಿಸಬೇಕು, ಪಕ್ಷದ ಕಾರ್ಯಕರ್ತನ ಮೇಲೆ ಆದ ಅವಮಾನವನ್ನ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿ ಪಕ್ಷದ ಮುಖಂಡರಿಗೂ ಕೂಡ ಗಮನಕ್ಕೆ ತರಲಾಗುವುದು ಎಂದರು.