ಶಿವಮೊಗ್ಗ :- ಹಿಜಾಬ್ ವಿಚಾರವಾಗಿ ಸಿಎಂ ನೀಡಿದ ಹೇಳಿಕೆಯನ್ನು ಸಚಿವ ಮಧು ಬಂಗಾರಪ್ಪ ಸಮರ್ಥಿಸಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಮಾತನಾಡಿದ್ದಾರೆ. ಹೃದಯ ಶ್ರೀಮಂತಿಕೆ ತೋರಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ. ಎಲ್ಲಾ ಧರ್ಮಗಳಿಗೂ ಗೌರವ ಕೊಡಬೇಕು. ಕೋರ್ಟ್ ನಲ್ಲಿ ಏನಿದೆ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಬಿಜೆಪಿಯವರಿಗೆ ಚುನಾವಣೆ ಸಂದರ್ಭ ಬಂದಾಗ ಹಿಜಾಬ್ ತರಬೇಕು, ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕು. ನೀವೆಷ್ಟು ಕೀಳು ಮಟ್ಟದಲ್ಲಿ ಮಾತನಾಡ್ತೀರಾ ಅದೆಲ್ಲಾ ನೀವೆ ಎಂದು ತಿರುಗೇಟು ನೀಡಿದರು.
ಹಿಜಾಬ್ ವಿಚಾರದಲ್ಲಿ ರಾಜ್ಯದಲ್ಲಿ ಗಲಭೆಯಾದ್ರೆ ಸಿಎಂ ಸಿದ್ದರಾಮಯ್ಯ ಕಾರಣ ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ದಂಗೆ ಮಾಡುವವರೇ ಹೀಗೆ ಹೇಳುವುದು. ಕಾನೂನು ಬಹಳ ಗಟ್ಟಿಯಾಗಿದೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಎಲ್ಲಾ ಧರ್ಮಗಳಿಗೂ ಗೌರವ ಕೊಡಬೇಕು, ಅದೇ ರೀತಿ ಹಿಜಾಬ್ ಗೂ ಎಂದರು.