ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ಚರಂಡಿಗಳು ಅನೈರ್ಮಲ್ಯದಿಂದ ಕೂಡಿದ್ದು, ಅವೈಜ್ಞಾನಿಕ ಚರಂಡಿ ವೆವಸ್ಥೆಯಿಂದ ಗ್ರಾಮದಲ್ಲಿ ಕೊಳಚೆ ನೀರಿನ ಅವಾಂತರ ಸೃಷ್ಟಿಯಾಗಿದೆ. ಕಳೆದ ಮೂರು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು ಗ್ರಾಮ ಪಂಚಾಯತ್ ದೂರಾಡಳಿತಕ್ಕೆ ಛಿ ಮಾರಿ ಹಾಕಿದ್ದಾರೆ.
ದರ್ಶನ್ ಗೆ ಕಂಟಕವಾದ್ರಾ ಗೆಳತಿ ಪವಿತ್ರಾ: ನಟನ ಸೂಚನೆಯಿಂದಲೇ ಕಿಡ್ನ್ಯಾಪ್ ನಡೆದಿತ್ತು ಎಂದ ಲಾಯರ್!
ಹೌದು, ಅಥಣಿ ತಾಲೂಕಿನ ಮಧಭಾವಿ ಗ್ರಾಮದ ಭಜಂತ್ರಿ ಕಾಲೋನಿಯಲ್ಲಿ ಕಳೆದ ಮೂರು ವರ್ಷಗಳಿಂದ ಚರಂಡಿ ವೆವಸ್ಥೆ ಹದಗೆಟ್ಟಿದ್ದು ಸ್ಥಳೀಯ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದರು ಅಧಿಕಾರಿಗಳು ಮಾತ್ರ ಜಾನ ಮೌನವಹಿದ ಅಧಿಕಾರಿಗಳ ವಿರುದ್ಧ ಮಹಿಳೆಯರು ಹಿಡಿ ಶಾಪ ಹಾಕಿದ್ದಾರೆ.
ದಿನನಿತ್ಯ ಕೊಳಚೆ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಲಾ ಮಕ್ಕಳು ವಯೋ ವೃದ್ಧರು ಮುಲಭೂತ ಸೌಕರ್ಯಕ್ಕಾಗಿ ಪರದಾಡುವಂತಾಗಿದ್ದು, ಗಬ್ಬೆದ್ದು ನಾರುತ್ತಿರುವ ಚರಂಡಿಯಿಂದ ಜನರಿಗೆ ಮುಕ್ತಿ ಇಲ್ಲದಂತಾಗಿದೆ.
ಶೀಘ್ರವೇ ಚರಂಡಿ ಸ್ವಚ್ಛಗೊಳಿಸುವಂತೆ ಮಹಿಳೆಯರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.