ಬೆಂಗಳೂರು: ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ಹಿರಿಯ ಸಾಹಿತಿ ಕೃಷ್ಣ ಕೊಲ್ಹಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿಯಾಗಿ ಎಂ.ಎಂ.ಕಲ್ಬುರ್ಗಿ ಅವರ 42 ಸಮಗ್ರ ಸಂಪುಟಗಳ ಬಿಡುಗಡೆಗೆ ದಿನಾಂಕ ನೀಡುವಂತೆ ಮನವಿ ಸಲ್ಲಿಸಿದರು. ‘ಕಾವೇರಿ’ ಯಲ್ಲಿ ಭೇಟಿಯಾದ ಅವರು ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು.
Personal Loan: ಗಮನಿಸಿ.. ಪರ್ಸನಲ್ ಲೋನ್ ಪಡೆಯಲು RBI ನಿಂದ ಹೊಸ ರೂಲ್ಸ್.! ಬದಲಾವಣೆ ಏನು ಗೊತ್ತಾ..?
ಕಲ್ಬುರ್ಗಿ ಅವರ ಸಾಹಿತ್ಯದ ಸಮಗ್ರ ಸಂಪುಟ ಕುರಿತು ಮುಖ್ಯಮಂತ್ರಿಯವರಿಗೆ ಅವರು ವಿವರಿಸಿದರು. ಸೂಕ್ತ ದಿನಾಂಕ ನೀಡುವ ಭರವಸೆ ನೀಡಿದರು. ಹಾಗೆಯೇ ದಾಸ ಸಾಹಿತ್ಯದ ಸಮಗ್ರ ಸಂಪುಟ ಕೂಡ ಸಿದ್ಧ ಆಗುತ್ತಿದ್ದು ಅದಕ್ಕೆ ಸರ್ಕಾರದಿಂದ ಬಿಡುಗಡೆ ಆಗಬೇಕಿದ್ದ ಹಣ ಕೊಡಿಸುವಂತೆಯೂ ಅವರು ಕೋರಿಕೆ ಸಲ್ಲಿಸಿದರು.