ಈ ಬಾರಿಯ ಐಪಿಎಲ್ 2025ರ ಮೆಗಾ ಹರಾಜಿಗೆ ಕೆಎಲ್ ರಾಹುಲ್ ಬಂದಿದ್ದು, ಭಾರೀ ಕುತೂಹಲ ಮೂಡಿಸಿದೆ.
ಹೆಸರಾಂತ ಆರ್ಥಿಕ ತಜ್ಞ ವಿವೇಕ್ ದೇಬರಾಯ್ ನಿಧನ: PM ಮೋದಿ ಸೇರಿ ಹಲವರ ಸಂತಾಪ!
ರೀಟೆನ್ಷನ್ ಬಳಿಕ ಕೆ.ಎಲ್ ರಾಹುಲ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಾಲಿಗೆ ಹರಿಬಿಟ್ಟಿದ್ದಾರೆ. ತಮ್ಮ ಹಿತಾಸಕ್ತಿಗಾಗಿ ಆಡೋರು ನಮಗೆ ಬೇಕಿಲ್ಲ. ತಂಡದ ಗೆಲುವಿಗೆ ಆಡೋ ಆಟಗಾರರನ್ನು ಉಳಿಸಿಕೊಂಡಿದ್ದೇವೆ ಎಂದಿದ್ದಾರೆ. ಎಲ್ಲೂ ಕೆ.ಎಲ್ ರಾಹುಲ್ ಹೆಸರು ಹೇಳದೆ ಆಕ್ರೋಶ ಹೊರಹಾಕಿದ್ದಾರೆ. ಇವರ ಹೇಳಿಕೆ ಎಲ್ಲೆಡೆ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಮೆಗಾ ಆಕ್ಷನ್ಗೆ ಮುನ್ನವೇ ಕ್ಯಾಪ್ಟನ್ ಕೆ.ಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ದೂರ ಆಗಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೆ.ಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳಲು ಲಕ್ನೋ ತಂಡ ಮುಂದಾಗಿತ್ತು. ಆದರೆ, ಇವರು ಪರ್ಸನಲ್ ಮತ್ತು ಪ್ರೊಫೆಷನಲ್ ಕಾರಣಕ್ಕೆ ತಂಡ ತೊರೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.