ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಧರ್ಮ ಕೀರ್ತಿರಾಜ್ ಲಕ್ ಬದಲಾಗಿದೆ. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಹೊಸ ಹೊಸ ಕಥೆಗಳನ್ನು ಕೇಳುತ್ತಿರುವ ಧರ್ಮ ಕೀರ್ತಿರಾಜ್ ಇದೀಗ ಹೊಸ ಸಿನಿಮಾದ ಮುಹೂರ್ತ ಮಾಡಿದ್ದಾರೆ. ತಮ್ಮ ನೆಚ್ಚಿನ ಕೆಲಸಕ್ಕೆ ಮರಳಿರುವ ಧರ್ಮ ಕೀರ್ತಿ ರಾಜ್ ಅಮರಾವತಿ ಪೊಲೀಸ್ ಸ್ಟೇಷನ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಧರ್ಮ ಕೀರ್ತಿರಾಜ್ ಈಗ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಇನ್ಸ್ಟಾ ಖಾತೆಯಲ್ಲಿ ಧರ್ಮ ಕೀರ್ತಿರಾಜ್, ಶೂಟಿಂಗ್ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ನನ್ನ ಮೊದಲ ಶೂಟಿಂಗ್. ನನ್ನಿಷ್ಟದ ಕೆಲಸಕ್ಕೆ ಮರಳಿದ್ದೇನೆ. ಸಿನಿಮಾ ಅಮರಾವತಿ ಪೊಲೀಸ್ ಠಾಣೆ ಎಂಬ ಶೀರ್ಷಿಕೆಯನ್ನು ಧರ್ಮ ಕೀರ್ತಿರಾಜ್ ತಿಳಿಸಿದ್ದಾರೆ.
ಶಾಲೆಯಲ್ಲಿ ಶೂಟಿಂಗ್ ನಡೆಯುತ್ತಿದ್ದು, ಮಕ್ಕಳು ಧರ್ಮ ಕೀರ್ತಿರಾಜ್ ಅವರನ್ನು ಮುತ್ತಿದ್ದಾರೆ. ಪ್ರತಿಯೊಬ್ಬರಿಗೂ ಆಟೋಗ್ರಾಫ್ ಹಾಕಿರುವ ಧರ್ಮ ಕೀರ್ತಿರಾಜ್, ಶೂಟಿಂಗ್ ಎಂಜಾಯ್ ಮಾಡ್ತಿದ್ದಾರೆ. ಧರ್ಮ ಅವರ ಕೆಲಸಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶುಭಕೋರಿದ್ದಾರೆ. ಒಳ್ಳೆಯವರಿಗೆ ಒಳ್ಳೆಯದಾಗುತ್ತೆ, ತಲೆ ಕೆಡಿಸಿಕೊಳ್ಬೇಡಿ ಎನ್ನುತ್ತ ಧೈರ್ಯ ತುಂಬಿದ್ದಾರೆ.
ಅಮರಾವತಿ ಪೊಲೀಸ್ ಸ್ಟೇಷನ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಇದನ್ನು ಪುನೀತ್ ಅರಸಿಕೇರೆ ನಿರ್ದೇಶನ ಮಾಡ್ತಿದ್ದಾರೆ. ಕಥೆ, ಚಿತ್ರಕಥೆ ಹೊಣೆಯನ್ನೂ ಅವರೇ ಹೊತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹಿರಿಯ ನಟ ವಿನೋದ್ ರಾಜ್ ಕುಮಾರ್, ಸೆಪ್ಟೆಂಬರ್ ನಲ್ಲಿ ಸಿನಿಮಾ ಟೀಸರ್ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಕೋರಿದ್ದರು. ಕಡಲತೀರದ ಊರು ಅಮರಾವತಿಯಲ್ಲಿ ನಡೆಯುವ ಕಥೆಯನ್ನು ಇದು ಒಳಗೊಂಡಿದೆ. ಈ ಸಿನಿಮಾದಲ್ಲಿ ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೇದ್ವಿಕ ನಾಯಕಿಯಾಗಿದ್ದು, ಸಾಧು ಕೋಕಿಲಾ, ಧರ್ಮಣ್ಣ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.