ಶನಿವಾರ ನಡೆದ IPL ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್ ತಂಡ 21 ರನ್ಗಳ ಗೆಲುವು ಪಡೆದಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮಾಡಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ ತನ್ನ ಪಾಲಿನ 20 ಓವರ್ಗಳಿಗೆ 8 ವಿಕೆಟ್ಗಳ ನಷ್ಟಕ್ಕೆ 199 ರನ್ ಗಳಿಸಿತ್ತು. ಬಳಿಕ 200 ರನ್ಗಳ ಬೃಹತ್ ಗುರಿ ಹಿಂಬಾಲಿಸಿದ್ದ ಪಂಜಾಬ್ ಕಿಂಗ್ಸ್, ಶಿಖರ್ ಧವನ್ ಅವರ ಅರ್ಧಶತಕದ ಹೊರತಾಗಿಯೂ 5 ವಿಕೆಟ್ಗಳ ನಷ್ಟಕ್ಕೆ 178 ರನ್ಗಳಿಗೆ ಸೀಮಿತವಾಯಿತು. ಆ ಮೂಲಕ 21 ರನ್ಗಳ ಸೋಲು ಅನುಭವಿಸಿತು.
ಅಭಿಮಾನಿಗಳು ಮೈದಾನದಲ್ಲಿ ಹಾರ್ದಿಕ್ ರನ್ನು ನಿಂದಿಸುವವರಿಗೆ ಕಠಿಣ ಕ್ರಮ! – MCA ವಾರ್ನ್!
200 ರನ್ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕರಾದ ಶಿಖರ್ ಧವನ್ (50 ಎಸೆತಗಳಲ್ಲಿ 70 ರನ್) ಮತ್ತು ಜಾನಿ ಬೈರ್ಸ್ಟೋವ್ (29 ಎಸೆತಗಳಲ್ಲಿ 42 ರನ್) ಉತ್ತಮ ಆರಂಭ ನೀಡಿದ್ದರು. 11.3 ಓವರ್ಗಳಲ್ಲಿ 102 ರನ್ಗಳ ಜೊತೆಯಾಟ ದಾಖಲಾಗಿತ್ತು. ಇದರೊಂದಿಗೆ ಪಂಜಾಬ್ ಸುಲಭವಾಗಿ ಗೆಲುವು ಸಾಧಿಸುವಂತಿತ್ತು. ಆದರೆ ಈ ಹಂತದಲ್ಲಿ ಲಖನೌ ಬೌಲರ್ಗಳು ಸತತ ವಿಕೆಟ್ ಕಬಳಿಸಿ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿದರು.
128 ರನ್ಗಳಾಗುವಷ್ಟರಲ್ಲಿ ಎರಡನೇ ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್, 13 ರನ್ಗಳ ಅಂತರದಲ್ಲಿ ಮತ್ತೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಪ್ರಭಾಸಿಮ್ರಾನ್ ಸಿಂಗ್ (19), ಜಿತೇಶ್ ಶರ್ಮಾ (6) ಮತ್ತು ಸ್ಯಾಮ್ ಕರನ್ (0) ವಿಫಲರಾದರು. ಆದರೆ ಇಂಗ್ಲೆಂಡ್ನ ವಿಧ್ವಂಸಕ ಬ್ಯಾಟ್ಸ್ಮನ್ ಲಿಯಾಮ್ ಲಿವಿಂಗ್ಸ್ಟೋನ್ ಕ್ರೀಸ್ನಲ್ಲಿರುವುದರಿಂದ ಪಂಜಾಬ್ ಪಾಳಯ ಪಂದ್ಯದ ಭರವಸೆ ಕಳೆದುಕೊಳ್ಳಲಿಲ್ಲ. ಆದರೆ ಬಿಗಿಯಾಗಿ ಬೌಲಿಂಗ್ ಮಾಡಿದ ಲಖನೌದ ಬೌಲರ್ಗಳು ಅಂತಿಮವಾಗಿ ಪಂಜಾಬ್ ಅನ್ನು 178 ರನ್ಗಳಿಗೆ ನಿರ್ಬಂಧಿಸಿದರು. ಲಖನೌ ಬೌಲರ್ಗಳ ಪೈಕಿ ಚೊಚ್ಚಲ ಆಟಗಾರ ಮಯಾಂಕ್ ಯಾದವ್ 3 ಮತ್ತು ಮೋಹ್ಸಿನ್ ಖಾನ್ 2 ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲಖನೌ ಸೂಪರ್ ಜಯಂಟ್ಸ್ ನಿಗದಿತ ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 199 ರನ್ಗಳನ್ನು ಕಲೆ ಹಾಕಿತ್ತು. ಈ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕೆ ಇಳಿದ ಕೆಎಲ್ ರಾಹುಲ್ 9 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಆದರೆ ಕ್ವಿಂಟನ್ ಡಿ ಕಾಕ್ 38 ಎಸೆತಗಳಲ್ಲಿ 54 ರನ್, ನಿಕೋಲಸ್ ಪೂರನ್ 21 ಎಸೆತಗಳಲ್ಲಿ 42 ರನ್ ಮತ್ತು ಕೃಣಾಲ್ ಪಾಂಡ್ಯ 22 ಎಸೆತಗಳಲ್ಲಿ 43 ರನ್ ಗಳಿಸಿದರು.