ಬೇರೊಬ್ಬಳೊಂದಿಗೆ ಮದುವೆಯಾಗುತ್ತಿದ್ದ ಪ್ರಿಯಕರನಿಗೆ ಮಂಟಪದಲ್ಲೇ ಯುವತಿ ಮನಬಂದಂತೆ ಥಳಿಸಿದ ಘಟನೆ ಜರುಗಿದೆ.
ಮೈ ಮೇಲೆ ದೇವರು ಬರುತ್ತೆಂದು ಲಕ್ಷ ಲಕ್ಷ ವಂಚನೆ: ಸಾಲ ಕೊಡಿಸೋದು ಅವನೇ.. ಯಾಮಾರಿಸೋದು ಅವನೇ!
ವರನಿಗೆ ಯುವತಿ ಮದುವೆ ಮಂಟಪದಲ್ಲೇ ಧರ್ಮದೇಟು ನೀಡುತ್ತಿರುವುದನ್ನು ಕಂಡು ಕುಟುಂಬಸ್ಥರು ಶಾಕ್ ಆಗಿ ಹೋಗಿದ್ದಾರೆ.
ವರ ವಧುವಿನ ಕೊರಳಿಗೆ ಹಾರ ಹಾಕುತ್ತಿದ್ದಂತೆ ಅನಿರೀಕ್ಷಿತವಾಗಿ ಯುವತಿಯೊಬ್ಬಳು ವೇದಿಕೆಯ ಮೇಲೆ ಬಂದಿದ್ದಾಳೆ. ಬಂದ ಯುವತಿ ಏಕಾಏಕಿ ಮಧುಮಗನಿಗೆ ಒದಿಯಲು ಪ್ರಾರಂಭಿಸಿದ್ದಾಳೆ. ಮದುಮಗ ಸ್ವಲ್ಪ ದೂರ ಹೋಗಿ ಬಿದ್ದಿದ್ದು, ಯುವತಿ ತಕ್ಷಣವೇ ವರನನ್ನುಎಬ್ಬಿಸಿ ಮತ್ತೆ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ.
ಘಟನೆ ಕಂಡು ಅಲ್ಲಿದ್ದ ಸಂಬಂಧಿಕರು ಹಾಗೂ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ತನ್ನ ಕಣ್ಣೆದುರೇ ತನ್ನ ಭಾವಿ ಪತಿ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಂಡು ಆಘಾತಕ್ಕೊಳಗಾದ ವಧು ಮಹಿಳೆಯೊಂದಿಗೆ ವಾಗ್ವಾದಕ್ಕಿಳಿದಿದ್ದಾಳೆ. ಇದಕ್ಕೆ ಪ್ರತಿಯಾಗಿ ಯುವತಿಯೂ ವಧುವಿನೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾಳೆ.