ಬೆಂಗಳೂರು :- ಪ್ರೇಮಿಗಳಿಬ್ಬರು ಜಾಲಿ ರೈಡ್ ಮಾಡಿರುವ ಘಟನೆಯೊಂದು ರಾಜಧಾನಿಯಲ್ಲಿ ನಡೆದಿದ್ದು, ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಯುವಕ ಬೈಕ್ ಚಲಾಯಿಸಿದ್ದಾನೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಗೃಹ ಆರೋಗ್ಯ’ ಯೋಜನೆ ಜಾರಿಗೆ ಮುಂದಾದ ಆರೋಗ್ಯ ಇಲಾಖೆ: ಮುಂದಿನ ತಿಂಗಳಿನಿಂದ ಮನೆ ಮನೆಗೆ ಬರಲಿದೆ ಕ್ಲಿನಿಕ್!
ಯಲಹಂಕ ಸಂಚಾರಿ ಠಾಣಾ ವ್ಯಾಪ್ತಿಯ ರೇವಾ ಕಾಲೇಜು ಕ್ಯಾಂಪಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಪ್ರೇಮಿಗಳಿಬ್ಬರ ಜಾಲಿರೈಡ್ ಅನ್ನು ಹಿಂದೆ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಹೆಬ್ಬಾಳ ಫ್ಲೈ ಓವರ್ ಮೇಲೆ ಯುವಕನೊಬ್ಬ ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ ಕೂರಿಸಿ ಜಾಲಿ ರೈಡ್ ಮಾಡಿದ್ದ. ನಂತರ ಯುವಕನನ್ನು ಹೆಬ್ಬಾಳ ಸಂಚಾರಿ ಪೊಲೀಸರು ಬಂಧಿಸಿದ್ದರು. ಈ ಘಟನೆ ನಂತರವು ಎಚ್ಚೆತ್ತುಕೊಳ್ಳದೇ ಯುವ ಜೋಡಿಯೊಂದು ಇದೀಗ ಜಾಲಿ ರೈಡ್ ಮಾಡಿರುವುದು ಕಂಡುಬಂದಿದೆ.
ಹೀಗಾಗಿ ಇಂತಹವರ ವಿರುದ್ಧ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.